ಕುಂದಗೋಳ : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ನಿಮಗೊಂದು ನಮಸ್ಕಾರ. ಈ ಕುಂದಗೋಳ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಈ ಹಾಸ್ಟೇಲ್ ಕಾಲಿಡುದ ತಡಾ ಮುರಿದ ಹೋದ ಟ್ರಂಕ್ ರಿಪೇರಿ ಮಾಡಾಸಾಕ್ ವೆಲ್ಡಿಂಗ್ ಶಾಪ್ ಹೊಂಟಾರ ನೋಡ್ರಿ ನೀವೂ ಇವ್ರಿಗೆ ಹೊಸಾ ಟ್ರಂಕ್ ಕೊಡೋದು ಯಾವಾಗ ಅಂತ್ ?
ಈ ಪಾಲಕರು ತಮ್ಮ ಮಕ್ಕಳನ್ನು ಹಾಸ್ಟೇಲ್ ಬಿಡಾಕ್ ಬಂದಾಗ ತಮ್ಮ ಮಕ್ಕಳ ಬಟ್ಟೆ, ಪುಸ್ತಕ, ಹಣ ಜೋಪಾನ ಇರ್ಲಿ ಅಂತ್ಹೇಳಿ ಸ್ವತಃ ಪಾಲಕರೇ ರೊಕ್ಕಾ ಕೊಟ್ಟ ಟ್ರಂಕ್ ರಿಪೇರಿ ಮಾಡಿಸಿ ಮಕ್ಕಳಿಗೆ ಕೊಟ್ಟು ಹೊಂಟಾರ. ಯಾವ ಹಾಸ್ಟೇಲ್ ಸಿಬ್ಬಂದಿನೂ ಈ ಮಾತ್ ಅವ್ರಿಗೆ ಹೇಳಿಲ್ಲಾ ಪಾಪಾ ಅವ್ರಿಗೆ ನೀವ್ ಕ್ಲಾಸ್ ತಗೋಬ್ಯಾಡ್ರಿ.
ನಿವೇನೋ ಈ ಕಾಲೇಜು ಮಕ್ಕಳಿಗೆ ಹೊಸಾ ಹೊಸಾ ಕಬೋಡ್ ಕೊಟ್ಟು, ಈ ಪ್ರಾಥಮಿಕ ಶಾಲೆ ಹಾಸ್ಟೇಲ್ ಮಕ್ಕಳಿಗೆ ಈ ತಗಡಿನ ಡಬ್ಬಾ ಕೊಟ್ರ್ ಹೇಂಗರಿ, ಅದು ಚಿಲಕ್ ಕಿತ್ತ್ ಮುರಿದು ಹೋದ್ರು ಮೂರು ವರ್ಷಕ್ಕೆ ಒಮ್ಮೆ ಅಂತ್ ಹೊಸಾ ಟ್ರಂಕ್ ಕೊಡೋದು ಅಲ್ಲಿಯವರೆಗೂ ಮಕ್ಕಳ ಸಾಮಗ್ರಿ ರಕ್ಷಣೆ ಹೇಂಗ್ ?
ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೊಸಾ ಕಬೋಡ್ ಬರ್ತಾವ್ ರೀ, ಈಗಿರೋ ಟ್ರಂಕ್ ಬಾಳ್ ಹಾಳಾಗಿಲ್ಲ, ಮಕ್ಕಳು ಪಾಲಕರು ಚಿಲಕ್ ಸರಿ ಪಡಿಸಾಕ್ ತಗೋಂಡ್ ಹೋಗ್ಯಾರ್ ಅಂತಾರ್.
ಅದೇನೆ ಇರ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳೇ ನಿಮ್ಮ ಮನ್ಯಾಗ್ ನಿಮ್ಮ ಮಕ್ಕಳಿಗೂ ನೀವೂ ಈ ತರಹದ ಟ್ರಂಕ್ ಕೊಟ್ಟರಿ ಏನ್ರೀ, ದಯವಿಟ್ಟು ಮಕ್ಕಳಿಗೆ ಹೊಸಾ ಟ್ರಂಕ್ ಇಲ್ಲವೆ ಕಬೋಡ್ ವ್ಯವಸ್ಥೆ ಮಾಡಿಸಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
26/10/2021 01:35 pm