ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶಾಲೆ ಮುಂದೆ ಏನ್ರಿ ಇದು ದುರಾವಸ್ಥೆ, ಪುರಸಭೆ ಅಧಿಕಾರಿಗಳೇ ಏನು ಮಾಡ್ತಾ ಇದ್ದೀರಿ

ನವಲಗುಂದ : ಅಧಿಕಾರಿಗಳ ನಿರ್ಲಕ್ಷತನ ಮತ್ತು ಬೇಜವಾಬ್ದಾರಿಗೆ ಇದು ಒಳ್ಳೆಯ ಉದಾಹರಣೆ ಅಂದ್ರು ತಪ್ಪಿಲ್ಲಾ, ಇಂತಹ ಕೊಳಚೆಯ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸಂಚಾರಿಸುವ ಅನಿವಾರ್ಯತೆ ಬಂದಿರೋದು ಪುರಸಭೆ ಅಧಿಕಾರಿಗಳ ನಿರ್ಲಕ್ಷತನವನ್ನು ಎತ್ತಿ ತೋರುತ್ತಿದೆ.

ಇದು ನವಲಗುಂದ ಪಟ್ಟಣದಲ್ಲಿರುವ ಲಿಂಗರಾಜ ಶಿಕ್ಷಣ ಸಮಿತಿಯ ರೋಟರಿ ಪ್ರೌಢ ಶಾಲೆಯ ಮುಖ್ಯ ದ್ವಾರದ ಮುಂಭಾಗದ ದುಸ್ಥಿತಿ ರೀ, ಈ ಬಗ್ಗೆ ಕೊಂಚವೂ ಗಮನ ಹರಿಸದೇ ನಾವು ಆಯ್ತು ನಮ್ಮ ಕಚೇರಿ ಆಯ್ತು ಅಂತಾ ಪುರಸಭೆ ಅಧಿಕಾರಿಗಳು ಕೈ ಕಟ್ಟಿ ಕುಳಿತಂತೆ ಕಾಣುತ್ತಿದೆ. ಆವರಣದಲ್ಲಿ ಕುಡುಕರ ಹಾವಳಿ, ಸಾರ್ವಜನಿಕರಿಂದ ಮೂತ್ರ, ಸ್ಥಳೀಯರಿಂದಲೂ ಇಲ್ಲಿ ಕಸ ಚಲ್ಲಲಾಗುತ್ತಿದೆಯಂತೆ, ಇದರಿಂದ ಹಂದಿಗಳ ಹಾವಳಿ ಸಹ ಹೆಚ್ಚಿದೆ. ಈಗಾಗಲೇ ಶಾಲೆ ಕೂಡ ಆರಂಭವಾಗಿವೆ. ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗದ ಭಯ ಸಹ ಕಾಡ ತೊಡಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಸ್ವಚ್ಛತೆ ಕಡೆ ಗಮನ ಹರಿಸಿ, ಸಿಬ್ಬಂದಿ ನೇಮಿಸಬೇಕಿದೆ...

ವರದಿಗಾರ ವಿನೋದ ಇಚ್ಚಂಗಿ,

ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Manjunath H D
Kshetra Samachara

Kshetra Samachara

09/09/2021 12:35 pm

Cinque Terre

52.52 K

Cinque Terre

1

ಸಂಬಂಧಿತ ಸುದ್ದಿ