ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಬಸ್ ವ್ಯವಸ್ಥೆಗಾಗಿ ಲಾಡ್‌ಗೆ ವಿದ್ಯಾರ್ಥಿಗಳಿಂದ ಮನವಿ

ಕಲಘಟಗಿ: ತಾಲೂಕಿನ ಬೇಗೂರ ಗ್ರಾಮದಿಂದ ಶಾಲಾ ಕಾಲೇಜುಗಳಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಮಾಜಿ ಸಚಿವ ಸಂತೋಷ್‌ ಲಾಡ್ ಅವರಿಗೆ ಮನವಿ ಮಾಡಿದರು.

ಮಡ್ಕಿಹೊನ್ನಳ್ಳಿಯಲ್ಲಿನ ಲಾಡ್ ಅವರ ಅಮೃತ ನಿವಾಸಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು, ''ಬಸ್ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಇದರಿಂದಾಗಿ ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಹಲವು ತಿಂಗಳಿಂದ ಅಧಿಕಾರಿಗಳಿಗೆ ಬಸ್ ಸಮಸ್ಯೆ ಕುರಿತು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ'' ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ.

ತಕ್ಷಣವೇ ಮಾಜಿ ಸಚಿವ ಸಂತೋಷ್‌ ಲಾಡ್ ದೂರವಾಣಿ ಮೂಲಕ ಕೆಎಸ್ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

07/01/2021 12:47 pm

Cinque Terre

24.35 K

Cinque Terre

3

ಸಂಬಂಧಿತ ಸುದ್ದಿ