ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆಯವರು ಉಪವಾಸ ಇದ್ದಾಗ ಹೊರಗಿನವರಿಗೆ ಆತಿಥ್ಯಕ್ಕೆ ಆಹ್ವಾನ: ಏನಿದು ಸರ್ಕಾರದ ನಿರ್ಧಾರ...?

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆರಂಭವಾಗಿ 12 ವರ್ಷ ಕಳೆದರೂ ಅತಿಥಿ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರ ಮೇಲೆ ನಿಂತಿದೆ. ಒಮ್ಮೆ ಬೋಧಕ ಸಿಬ್ಬಂದಿ ನೇಮಕಾತಿಯಾಗಿದ್ದರೆ ಬೋಧಕೇತರ ಸಿಬ್ಬಂದಿ ನೇಮಕಾತಿ ಗಗನ ಕುಸುಮವಾಗಿದೆ. ಆಡಳಿತಾತ್ಮಕ ಕಟ್ಟಡ ಸೇರಿದಂತೆ ಮೂಲ ಸೌಲಭ್ಯಗಳಿಲ್ಲ. ರಾಜ್ಯದ ಏಕೈಕ ಕಾನೂನು ವಿವಿ ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಇನ್ನೂ ಎಂಟು ವಿಶ್ವವಿದ್ಯಾಲಯ ಆರಂಭಕ್ಕೆ ಮುಂದಾಗಿದೆ..

ಹೌದು..ಹುಬ್ಬಳ್ಳಿಯಲ್ಲಿರುವ ಕಾನೂನು ವಿಶ್ವವಿದ್ಯಾಲಯ ನಗರದಲ್ಲಿ ಸ್ಥಾಪನೆಯಾಗಿ 12 ವರ್ಷಗಳೇ ಕಳೆದರೂ ಇತರೆ ವಿವಿಗಳಿಗೆ ಹೋಲಿಸಿದರೆ ಇಂದಿಗೂ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಸುಸಜ್ಜಿತ ಭೂಮಿ ದೊರೆಯದ ಕಾರಣ ಹರಿದು ಹಂಚಿ ಹೋಗಿರುವ 55 ಎಕರೆಯಲ್ಲಿ ವಿವಿ ಆರಂಭವಾಗಿದೆ. ಲಾ ಸ್ಕೂಲ್, ಉನ್ನತ ಹುದ್ದೆಯಲ್ಲಿರುವವರೆಗೂ ವಸತಿ ಗೃಹಗಳು, ಹಾಸ್ಟೆಲ್ ಒಂದಿಷ್ಟು ಬಿಟ್ಟರೆ ಇಂದಿಗೂ ವಿವಿಯ ಆಡಳಿತ ಕಟ್ಟಡ ಲೋಕೋಪಯೋಗಿ ಕಟ್ಟಡದಲ್ಲಿ ನಡೆಯುತ್ತಿದೆ.

ವಿಶ್ವ ವಿದ್ಯಾಲಯ ಆರಂಭವಾಗಿ 12 ವರ್ಷಗಳಲ್ಲಿ ಪ್ರೊಫೆಸರ್, ರೀಡರ್, ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆದಿರುವುದು ಕೇವಲ ಒಮ್ಮೆ. 2013 ರಲ್ಲಿ 14 ಹುದ್ದೆಗಳ ಅಧಿಸೂಚನೆಗೆ ನೇಮಕವಾಗಿದ್ದು 11 ಜನರು ಮಾತ್ರ. 2021 ನವೆಂಬರ್ ತಿಂಗಳಲ್ಲಿ 13 ಹುದ್ದೆಗಳ ನೇಮಕಾತಿಗೆ ಆಹ್ವಾನಿಸಿದ್ದರೂ ಪ್ರಕ್ರಿಯೆ ಮುಂದುವರೆದಿಲ್ಲ. ಆದರೆ ಬೋಧಕೇತರ ಹುದ್ದೆಗಳಿಗೆ ಎರಡು ಬಾರಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರೂ ಪ್ರಕ್ರಿಯೆ ನಡೆದಿಲ್ಲ.

ಒಟ್ಟಿನಲ್ಲಿ 12 ವರ್ಷದ ಹಿಂದೆ ಆರಂಭವಾದ ವಿವಿ ಇಷ್ಟೊಂದು ನಿರ್ಲಕ್ಷ್ಯಕ್ಕೆ ಒಳಗಾಗಿರುವಾಗ ಎಂಟು ವಿವಿ ಆರಂಭಿಸಲು ಸರ್ಕಾರ ಮುಂದಾಗಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/09/2022 03:57 pm

Cinque Terre

61.48 K

Cinque Terre

2

ಸಂಬಂಧಿತ ಸುದ್ದಿ