ಕುಂದಗೋಳ: ಸರ್ಕಾರಿ ಶಾಲೆ ಅಂದ್ರೆ ಈ ಸರ್ಕಾರ, ಜನಪ್ರತಿನಿಧಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಗೆ ಯಾಕಿಷ್ಟು ನಿರ್ಲಕ್ಷ್ಯ? ಅಲ್ಲಿನ ಅವ್ಯವಸ್ಥೆ ಸುಧಾರಣೆ ಯಾವಾಗ?
ಹೌದು. ಈ ಎಲ್ಲಾ ಮಾತುಗಳನ್ನು ಕೇಳುತ್ತಿರೋದು ಕುಂದಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಪುರ ಶಾಲೆಯ 170 ವಿದ್ಯಾರ್ಥಿಗಳ ಪೋಷಕರು. ನಿತ್ಯ ಮಕ್ಕಳಿಗೆ ಜ್ಞಾನಾರ್ಜನೆ ನೀಡಬೇಕಾದ ಶಾಲೆ ಅವ್ಯವಸ್ಥೆ ತಲುಪಿದ್ದು, ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದೆ. ಕಟ್ಟಡದ ಸಿಮೆಂಟ್ ಪದರು ಕಿತ್ತು ಬೀಳುತ್ತಿದೆ, ಎಲ್ಲೆಂದರಲ್ಲಿ ಗೋಡೆ ಬಿರುಕು ಬಿಟ್ಟಿವೆ, ಅಡುಗೆ ಕೋಣೆ ಸಹ ಸೋರುತ್ತಿದ್ದು ಅಕ್ಷರ ಪಾತ್ರೆಯ ಅಡುಗೆ ಈಡಲು ಸ್ಥಳದ ಸಮಸ್ಯೆ ಉಂಟಾಗಿದ್ದು ಕಟ್ಟಡ ಅಲ್ಲಲ್ಲಿ ಶಿಥಿಲಾವಸ್ಥೆ ತಲುಪಿದೆ.
ಇನ್ನು ಶಾಲಾ ನೆಲಹಾಸು ಕಿತ್ತು ಉಸುಕು ಕಲ್ಲು ಹೊರಬಂದಿವೆ. ಅಬ್ಬಾ! ಶೌಚಾಲಯದ ಪರಿಸ್ಥಿತಿ ಮಕ್ಕಳಿಗೆ ಕಾಯಿಲೆ ತರವುದಂತು ಖಾತ್ರಿ ಅಷ್ಟೊಂದು ಅವ್ಯವಸ್ಥೆ, ಅನೈರ್ಮಲ್ಯ ತುಂಬಿ ತುಳುಕುತ್ತಿದೆ.
ಇಷ್ಟೆಲ್ಲಾ ಸಮಸ್ಯೆ ನಡುವೆ ಇಲ್ನೋಡಿ ರಾಡಿ ಕೆಂಪು ನೀರು ಸಂಗ್ರಹವಾದ ಜಾಗದಲ್ಲಿ ಮಕ್ಕಳ ಆಟಾ ಆಡಬೇಕು. ಈ ಶಾಲೆಗೆ ಕೊಠಡಿ ಭಾಗ್ಯ, ಆವರಣಕ್ಕೆ ಪೇವರ್ಸ್ ಕಲ್ಪಿಸುವಂತೆ ಶಾಲಾ ಮುಖ್ಯೋಪಾಧ್ಯಾಯರು ಮೇಲಾಧಿಕಾರಿಗಳಿಗೆ ಪತ್ರ ಬರೆದು ಅಭಿವೃದ್ಧಿಗೆ ಕಾಯ್ತಾ ಇದ್ದಾರೆ.
ಒಟ್ಟಾರೆ 20 ವರ್ಷ ಹಳೆಯ ಕಟ್ಟಡದ ಸರ್ಕಾರಿ ಶಾಲೆಯೊಂದು ಅವ್ಯವಸ್ಥೆಗೆ ಸಿಲುಕಿದ್ದು ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮೇಲಾಧಿಕಾರಿಗಳ ಗಮನ ಹರಿಸಿ ಅಭಿವೃದ್ಧಿ ಹಸ್ತ ನೀಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/07/2022 04:52 pm