ಕುಂದಗೋಳ : ಕೊರೊನಾ ವೈರಸ್ ಕಾರಣ ಈಗೇನು ಶಾಲೆಗೆ ರಜೆ ಇದೆ. ನಾಳೆ ಶಾಲೆಗಳು ಆರಂಭವಾದ್ರೆ ನಮ್ಮ ಶಾಲೆಗೆ ಹೋದ್ರೆ ಮಲ ಮೂತ್ರ ವಿಸರ್ಜನೆಗೆ ಎಲ್ಲಿ ಹೋಗ್ಬೇಕು ?
ಈಗಾಗಲೇ ಬೀಳುವ ಹಂತದಲ್ಲಿರುವ ಶಾಲೆಯ ಶೌಚಾಲಯವನ್ನು ಶಾಲೆ ಆರಂಭದೊಳಗೆ ನಿರ್ಮಿಸಿ ಎಂದು ಸ್ವತಃ ಗ್ರಾಮಸ್ಥರೇ ಪಬ್ಲಿಕ್ ನೆಕ್ಸ್ಟ್ ಗೆ ವಿಡಿಯೋ ಕಳುಹಿಸಿದ್ದಾರೆ.
ಇದೋ ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಶೌಚಾಲಯ ಅವ್ಯವಸ್ಥೆ ಹಾದಿ ಹಿಡಿದಿದ್ದು, ಗೋಡೆಗಳು ಬೀಳುತ್ತಿವೆ, ಶೌಚಾಲಯ ಅನೈರ್ಮಲ್ಯ ತುಂಬಿದ್ದು,
ಮಕ್ಕಳು ಇಲ್ಲಿ ಮಲ ಮೂತ್ರ ವಿಸರ್ಜನೆಗೆ ಹೋದ್ರೆ ಅಪಘಾತ ಕಟ್ಟಿಟ್ಟ ಬುತ್ತಿ ಈ ಕಾರಣದಿಂದಾಗಿ ಶಾಲೆ ಆರಂಭದ ಮೊದಲು ಈ ವ್ಯವಸ್ಥೆ ಸರಿಪಡಿಸಿರಿ ಎಂದು ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
Kshetra Samachara
15/12/2020 01:00 pm