ನವಲಗುಂದ : ನವಲಗುಂದ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಬಿಟ್ಟು ಬಿಡದೆ ಕಾಡುತ್ತಿರುವ ಸಮಸ್ಯೆ ಅಂದ್ರೆ ಅದು ಸಮರ್ಪಕ ಬಸ್ ಕೊರತೆ ಎನ್ನುವಂತಾಗಿದೆ. ತಾಲ್ಲೂಕಿನ ಕಾಲವಾಡ ಗ್ರಾಮದಲ್ಲಿ ಬಸ್ ಕೊರತೆಯಿಂದ ವಿದ್ಯಾರ್ಥಿಗಳು ಬಾಗಿಲಿಗೆ ನೇತು ಪ್ರಯಾಣ ಬೆಳೆಸುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ರಾಷ್ಟ್ರಯ ಹೆದ್ದಾರಿಯಿಂದ ಒಂದು ಕಿಲೋಮೀಟರ್ ನಷ್ಟು ದೂರ ಒಳಗಡೆ ಕಾಲವಾಡ ಗ್ರಾಮ ಇದೆ. ಜನ ಹುಬ್ಬಳ್ಳಿ ಅಥವಾ ನವಲಗುಂದ ಕಡೆಗೆ ಹೋಗಬೇಕಾದರೆ ರಾಷ್ಟ್ರಯ ಹೆದ್ದಾರಿವರೆಗೆ ನಡೆದುಕೊಂಡೆ ಬರುವ ಪರಿಸ್ಥಿತಿ ಇದೆ. ಕಾರಣ ದಿನಕ್ಕೆ ಗ್ರಾಮದ ಒಳಗಡೆ ಬರುವ ಬಸ್ ಗಳು ಕೇವಲ ನಾಲ್ಕು ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.
ಸುಮಾರು 200 ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ದಿನನಿತ್ಯ ಪ್ರಯಾಣ ಬೆಳೆಸುವಂತಹ ಗ್ರಾಮಕ್ಕೆ ಈಗ ಬಸ್ ಕೊರತೆ ಕಾಡುತ್ತಿದೆ. ಈ ಬಗ್ಗೆ ನವಲಗುಂದ ಡಿಪೋ ವ್ಯವಸ್ಥಾಪಕರಿಗೆ ಮನವಿ ನೀಡಿದರೆ ಕೇವಲ ಭರವಸೆಯ ಮಾತನಾಡುತ್ತಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
Kshetra Samachara
28/09/2022 02:40 pm