ನವಲಗುಂದ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತಾಲೂಕಿನ ಕುಮಾರಗೋಪ್ಪ ಗ್ರಾಮದಲ್ಲಿ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದ ಯೋಜನೆ ಅಡಿಯಲ್ಲಿ 218 ನೇ ಕೆರೆಯನ್ನು ಪುನಶ್ಚೇತನಗೊಳಿಸಿ ಕೆರೆಯ ಹಸ್ತಾಂತರ ಕಾರ್ಯಕ್ರಮ ಜರುಗಿತು.
ಜಿಲ್ಲಾ ನಿರ್ದೇಶಕ ಸುರೇಶ ಎಂ, ಧಾರವಾಡ ಪ್ರಾದೇಶಿಕ ವಿಭಾಗದ ಇಂಜಿನಿಯರ್ ಮಂಜುನಾಥ್, ತಾಲೂಕು ಯೋಜನಾಧಿಕಾರಿ ಓಮು ಮರಾಠಿ, ಕೃಷಿ ಅಧಿಕಾರಿ ಉಮೇಶ್ ಕುಸಗಲ್, ಜ್ಞಾನವಿಕಾಸ ಮಹಿಳಾ ಸಮನ್ವಯ ಅಧಿಕಾರಿ ಪುಷ್ಪಲತಾ ಸೇರಿದಂತೆ ಇತರರ ಸಹಭಾಗಿತ್ವದಲ್ಲಿ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಇನ್ನು ಈ ಸಂಧರ್ಭದಲ್ಲಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾತೇಶ ಕುಲಕರ್ಣಿ, ಧರ್ಮಸ್ಥಳ ಯೋಜನೆಯ ಜಿಲ್ಲಾಧಿಕಾರಿ ಪ್ರಾದೇಶಿಕ ನಿರ್ದೇಶಕ ಸಿ.ಎಂ ಸಿದ್ದರಾಮಶೆಟ್ರು, ಶ್ಯಾಮಸುಂದರ ಡಂಬಳ, ಯಮನೂರ ಗ್ರಾ.ಪಂ ಪಿಡಿಓ ವಿರೇಶ ಗುಡದೂರಮಠ ಭಾಗವಹಿಸಿದ್ದರು.
Kshetra Samachara
13/02/2021 01:59 pm