ಕುಂದಗೋಳ : ಸಂಘಟನೆಗಳು ಯುವಕರ ಸಮೂಹಗಳು ಎಂದರೇ ಅವು ತಾವು ಮಾಡುವ ಸತ್ಕಾರ್ಯದಿಂದಲೇ ಹೆಸರಾಗುತ್ತವೆ, ಅಂತಹುದೇ ಶ್ರೀ ರಾಮ್ ಸೇನೆಯೊಂದು ತಮ್ಮೂರಲ್ಲಿ ಅಭಿವೃದ್ಧಿ ಕಾರ್ಯ ಮಾಡಿ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದೆ.
ಹೌದು ! ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ರಾಮ್ ಸೇನೆ ಯುವಕರು ನೂತನ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಲ್ಲಿ ಗ್ರಾಮದ ಸಂಪೂರ್ಣ ಕುಡಿಯುವ ನೀರಿನ ಕೆರೆ ಸುತ್ತ ಸ್ವಚ್ಚತೆ ಮಾಡಿ ನೈರ್ಮಲ್ಯ ಕಾಪಾಡಿದ್ದಾರೆ.
ಕೆರೆ ಸುತ್ತ ಬಿದ್ದ ಕಸ, ಕಡ್ಡಿ, ಸಾರಾಯಿ ಬಾಟಲಿ ತ್ಯಾಜ್ಯ ಕಸ ಪ್ಲಾಸ್ಟಿಕ್ ಗಳನ್ನು ಆಯ್ದು ಸ್ವಚ್ಚತೆ ಕಾಪಾಡಿ ಗುಡೇನಕಟ್ಟಿ ಕೆರೆ ಸುತ್ತ ಹಾಗೂ ಶಾಲಾ ಆವರಣದ ಮುಂದೆ ಅನೈರ್ಮಲ್ಯ ಮಾಡದಂತೆ ಡಂಗೂರ ಸಾರಿ ಗ್ರಾಮಸ್ಥರಿಗೆ ಎಚ್ಚರಿಸಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಿದ್ದಾರೆ.
Kshetra Samachara
18/01/2021 02:50 pm