ನವಲಗುಂದ : ನಮ್ಮ ಗ್ರಾಮ ಪಂಚಾಯತ್ ಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದರೆ ಈ ಗ್ರಾಮದ ಜನರಿಗೆ ಬೀದಿಗಿಳಿದು, ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ, ಈ ಗ್ರಾಮಸ್ಥರ ಸಮಸ್ಯೆ ಏನು ಮತ್ತು ಗ್ರಾಮ ಪಂಚಾಯತ್ ವಿರುದ್ಧ ಯಾಕೆ ಗ್ರಾಮಸ್ಥರು ಗರಂ ಆಗಿದ್ದಾರೆ ಅನ್ನೋದನ್ನ ನಾವು ಹೇಳ್ತಿವಿ ಕೇಳಿ..
ಇದು ನಮ್ಮ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಇಂದು ಕಂಡು ಬಂದ ದೃಶ್ಯಗಳು, ಈ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಆದರೆ ಸ್ವಚ್ಛತಾ ಕಾರ್ಯ ಮಾಡ್ರಿ ಅಂತಾ ಪಂಚಾಯತ್ ಸದಸ್ಯರಿಗೆ ಈಗಾಗಲೇ ಮನವಿ ಕೂಡ ನೀಡಿದ್ದಾರಂತೆ, ಆದರೂ ಕೆಲಸ ಮಾತ್ರ ಆಗಿಲ್ಲ, ಇದನ್ನು ಪ್ರಶ್ನಿಸಲು ಹೋದಾಗ ವಾಲ್ಮೀಕಿ ಸಮಾಜಕ್ಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಕ್ಕೀರಪ್ಪ ಕುಣಸೆನ್ನವರ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ವರೆಗೆ ಹೊತ್ತು ಬಂದ ಗ್ರಾಮಸ್ಥರು ಕೆಂಡಾಮಂಡಲವಾಗಿದ್ರು, ಕೂಡಲೇ ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು ಸೇರಿದಂತೆ ಪಿಡಿಓ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಗ್ರಾಮ ಪಂಚಾಯತ್ ವಿರುದ್ಧ ಘೋಷಣೆ ಹಾಕಿದರು. ಅಧಿಕಾರಿಗಳು ಸ್ಥಳಕ್ಕೆ ಬರದೇ ಹೋದಲ್ಲಿ ಗ್ರಾಮ ಪಂಚಾಯತ್ ಗೆ ಬೀಗ ಹಾಕುವುದಾಗಿ ಎಚ್ಚರಿಸಿದರು.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
29/09/2021 04:39 pm