ನವಲಗುಂದ: ನವಲಗುಂದ ಪಟ್ಟಣದಲ್ಲಿ ಖಾಸಗಿ ವಾಹನಗಳ ಟಾಪ್ ಸವಾರಿ ಕಂಡು ಬರುತ್ತಿದೆ. ಈ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿ ಪ್ರಯಾಣಿಸುತ್ತಿರುವ ದೃಶ್ಯಾವಳಿ ಸಾಮಾನ್ಯ ಎಂಬಂತಾಗಿದೆ.
ಈ ರೀತಿಯ ಪ್ರಯಾಣದಲ್ಲಿ ಏನಾದರೂ ಅವಘಡ ಸಂಭವಿಸಿದಲ್ಲಿ ಹೊಣೆ ಯಾರು? ಎಂಬುದು ತಿಳಿಯದಂತಾಗಿದೆ. ನವಲಗುಂದ ಪಟ್ಟಣದಲ್ಲಿ ಸಂಚರಿಸುವ ಇಂತಹ ವಾಹನಗಳಿಂದ ಉಳಿದ ವಾಹನಗಳಿಗೂ ಆತಂಕ ಹೆಚ್ಚಾಗಿದೆ. ಇನ್ನು, ನವಲಗುಂದ ಪಟ್ಟಣದಲ್ಲೇ ಈ ಅಪಾಯಕಾರಿ ಪ್ರಯಾಣ ಕಂಡು ಬರುತ್ತಿರೋದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಎನ್ನುತ್ತಿದ್ದಾರೆ ಸಾರ್ವಜನಿಕರು.
ಈ ಬಗ್ಗೆ ʼಪಬ್ಲಿಕ್ ನೆಕ್ಸ್ಟ್ʼ ನವಲಗುಂದ ಪೊಲೀಸ್ ಠಾಣೆಯ ಪಿಎಸ್ಐ ಕಲ್ಮೇಶ ಬೆನ್ನೂರ ಅವರ ಗಮನಕ್ಕೆ ತಂದಿದ್ದು, ಅವರು ಮಾತನಾಡಿ, ಅಲ್ಲಲ್ಲಿ ಪೊಲೀಸ್ ಸಿಬ್ಬಂದಿಯಿಂದ ಟಾಪ್ ಪ್ರಯಾಣ ಹಾಗೂ ಹೆಚ್ಚಿನ ಸಂಖ್ಯೆಯ ಪ್ರಯಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಕೆಲವು ವೇಳೆ ಪೊಲೀಸರ ಕಣ್ಣು ತಪ್ಪಿಸಿ, ಇಂತಹ ಘಟನೆ ನಡೆಯುತ್ತವೆ. ಅದರೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
Kshetra Samachara
18/06/2022 12:58 pm