ಅವಳಿ ನಗರದ ಬಹುತೇಕ ಕಮರ್ಷಿಯಲ್ ಕಾಂಪ್ಲೆಕ್ಸ್ Basement ಪಾರ್ಕಿಂಗ್ ಸ್ಥಳಗಳು ಆಸ್ಪತ್ರೆ, ಹೊಟೆಲ್ ಬಾರ್ & ರೆಸ್ಟೋರೆಂಟ್ ಆಗಿ ಪರಿವರ್ತನೆಗೊಂಡಿವೆ. ಧಾರವಾಡದ ಜ್ಯುಬ್ಲಿ ಸರ್ಕಲ್, ಸುಭಾಶ್ ರಸ್ತೆ ಹಾಗೂ ಹುಬ್ಬಳ್ಳಿಯ ನಿಲಿಜಿನ್ ರಸ್ತೆ, ಚೆನ್ನಮ್ಮ ವೃತ್ತ, ಕೋರ್ಟ ಸರ್ಕಲ್ ಕ್ಲಬ್ ರೋಟ್, ಸರ್ಕಿಟ್ ಹೌಸ್ ರಸ್ತೆ, ಸ್ಟೇಶನ್ ರಸ್ತೆ, ದುರ್ಗದಬೈಲ, ಕುಸುಗಲ್ ರಸ್ತೆ ಕೇಶ್ವಾಪುರದ ಎಲ್ಲ ವಾಣಿಜ್ಯ ಮಳಿಗೆಗಳ Basement ಗಳು ಮಾಯವಾಗಿವೆ.
ಕಟ್ಟಡಗಳ ಮಾಲಿಕರು ಯಾವುದೇ ಕಾರಣಕ್ಕೂ ಪಾರ್ಕಿಂಗ್ ಸ್ಪೇಸ್ ಮಾರಾಟ ಅಥವಾ ಇನ್ನಿತರ ಚಟುವಟಿಕೆಗಳಿಗೆ ನೀಡುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ ಹಾಗೂ ಪಾಲಿಕೆ ನಿಯಮ ಉಲ್ಲಂಘನೆಯಾಗಿದೆ.
ಇದರ ಪರಿಣಾಮ ಆಯಾ ಕಮರ್ಷಿಯಲ್ ಕಾಂಪ್ಲೆಕ್ಸ್ ಮಾಲಿಕರ, ಸಿಬ್ಬಂದಿಯ ಹಾಗೂ ಗ್ರಾಹಕರ ವಾಹನಗಳು ರಸ್ತೆ ಹಾಗೂ ಫುಟ್ ಪಾಥ್ ರಾಜಾರೋಷವಾಗಿ ಬಂದು ನಿಲ್ಲುತ್ತಿವೆ. ಇದರಿಂದ ನಿತ್ಯ ಬಸ್ ಚಾಲಕರು ಹಾಗೂ ಇತರೆ ವಾಹನಗಳು ಸವಾರರು ಅಂಗೈಯಲ್ಲಿ ಜೀವ ಹಿಡಿದು ಓಡಾಡಬೇಕಾಗಿದೆ. ಇನ್ನು ಕೊಪ್ಪಿಕರ ರಸ್ತೆಯಲ್ಲಿ ಚಿಕ್ಕದಾದ ದ್ವಿಮುಖ ರಸ್ತೆಗಳ ಪಕ್ಕದಲ್ಲಂತೂ ವಾಹನ ಪಾರ್ಕಿಂಗ್ ಮಾಡಿದರೆ ದೇವರೇ ಗತಿ.
ಈ ಹಿಂದೆ ಪಾರ್ಕಿಂಗ್ ಅತಿಕ್ರಮಣ ತೆರವಿಗೆ ಮಹಾನಗರ ಪಾಲಿಕೆ ಕ್ರಮಕೈಗೊಂಡಿತ್ತು. ಆದರೆ ಸಿಬ್ಬಂದಿಯ ತಾರತಮ್ಯ ಹಾಗೂ ಪ್ರಭಾವಿಗಳ ಕೈವಾಡದಿಂದ ಅರ್ಧಕ್ಕೆ ನಿಂತು ಹೋಗಿತ್ತು. ಈಗಾಗಲೇ 300 ಕ್ಕೂ ಹೆಚ್ಚು ಅತಿಕ್ರಮಣ ಗುರುತಿಸಲಾಗಿದೆ. ಮತ್ತೇ ತೆರವು ಕಾರ್ಯ ಆರಂಭಿಸುವುದಾಗಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್ PublicNext ಗೆ ಪ್ರತಿಕ್ರಿಯಿಸಿದ್ದಾರೆ. ಹೇಳುತ್ತಿದ್ದಾರೆ.
ಆಶ್ಚರ್ಯದ ಸಂಗತಿ ಎಂದರೆ ಈ ಹಿಂದೆ ಕುಸುಗಲ್ ರಸ್ತೆಯಲ್ಲಿಯ ಕೆಲವು ಕಟ್ಟಡಗಳ ಪಾರ್ಕಿಂಗ್ ಅತಿಕ್ರಮಣ ತೆರವುಗೊಳಿಸುವ ಕಾರ್ಯ ಆರಂಭವಾಗಿತ್ತು. ಇದರಿಂದಾಗಿ ಆಯಾ ಕಟ್ಟಡಗಳ ಮಾಲಿಕರು ಅವುಗಳನ್ನು ಮಾರಿದರು. ಆಗ ಅವುಗಳನ್ನು ಖರೀದಿಸಿದ್ದ ಮಾಲಿಕರು ಈಗ ಮತ್ತೆ ಪಾರ್ಕಿಂಗ್ ಜಾಗೆಗಳಲ್ಲಿ ಬಾರ್ ರೆಸ್ಟೋರೆಂಟ್ ಆರಂಭಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಮ್ಮ PublicNext ಪಾರ್ಕಿಂಗ್ ಅತಿಕ್ರಮಣ ತೆರವು ಆಭಿಯಾನ ಆರಂಭಿಸಲಿದೆ. ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಳ್ಳುವುದು ಹಾಗೂ ಕಾನೂನು ಉಲ್ಲಂಘನೆ ತಡೆಯವುದೇ ನಮ್ಮ ಉದ್ದೇಶ. ನಿಮ್ಮ ಪ್ರದೇಶಗಳಲ್ಲಿ ಈ ರೀತಿ ನಿಯಮ ಉಲ್ಲಂಘನೆಯಾಗಿದ್ದರೆ ವಿಡಿಯೊದೊಂದಿಗೆ ಮಾಹಿತಿ ಹಂಚಿಕೊಳ್ಳಿ. Whatsapp Number: 73496 19443
ಬನ್ನಿ ನಮ್ಮ ಜನಪರ ಅಭಿಯಾನಕ್ಕೆ ಕೈಜೋಡಿಸಿ.
Kshetra Samachara
25/09/2020 04:08 pm