ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮೂವತ್ತು ಸಾವಿರ ಕೊಟ್ಟರೆ ಮಾತ್ರ ಆಶ್ರಯ ಯೋಜನೆ ಮನೆ ಭಾಗ್ಯ..?

ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ

ನವಲಗುಂದ : ರಾಜ್ಯದ ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಬಡವರ ನೆರವಿಗೆ ಬರುವಂತಹ ಕೆಲಸ ಮಾಡುತ್ತೆ, ಆದ್ರೆ ಈ ಯೋಜನೆಗಳು ಎಷ್ಟರ ಮಟ್ಟಿಗೆ ನಿರಾಶ್ರಿತರಿಗೆ ಮುಟ್ಟುತ್ತೆ ಅನ್ನೋದು ಪ್ರಶ್ನೆಯಾಗಿದೆ...

ಆಶ್ರಯ ಯೋಜನೆಯಡಿ ಸರ್ಕಾರ ನಿರಾಶ್ರಿತರಿಗೆ ಮನೆ ನಿರ್ಮಾಣಕ್ಕೆ ಮುಂದಾಗುತ್ತೆ ಆದರೆ ಗ್ರಾಮ ಪಂಚಾಯತ್ ನಿಂದ ಆರಿಸಿ ಬರುವ ಜನಪ್ರತಿನಿದಿನಗಳು ಈ ಯೋಜನೆಯಲ್ಲೂ ಹಗರಣ ನಡೆಸುತ್ತಿರೋದು ಬಡಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಆಶ್ರಯ ಯೋಜನೆಯಡಿಯಲ್ಲಿ ಬಡವರಿಗೆ ಮನೆ ಬೇಕಾದರೆ ತಲಾ ಮೂವತ್ತು ಸಾವಿರ ಹಣ ನೀಡಬೇಕಂತೆ, ಇಲ್ಲವಾದಲ್ಲಿ ಈ ಯೋಜನೆ ಫಲಾನುಭವಿಗಳಿಗೆ ಮರೀಚಿಕೆಯಗಿಯೇ ಉಳಿಯುವಂತೆ ಕಾಣುತ್ತಿದೆ.

ಕಳೆದ ಐದು ವರ್ಷದ ಅವಧಿಯಲ್ಲಿ ಈ ರೀತಿಯಾಗಿಯೇ ನಡೆದು ಬಂದಿದೆಯಂತೆ, ಯಾಕೆ ಹಣ ನೀಡಬೇಕು ಅಂತಾ ಕೇಳಿದ್ರೆ ಚುನಾವಣೆಯಲ್ಲಿ ನಾವು ಹಣ ಖರ್ಚು ಮಾಡಿದ್ದೇವೆ ಅಂತಾರಂತೆ,

ಇನ್ನು ಮುಂದೆ ಬರುವ ಜನಪ್ರತಿನಿಧಿಗಳು ಈ ರೀತಿ ಫಲಾನುಭವಿಗಳಿಗೆ ಬರುವ ಯೋಜನೆಯಲ್ಲಿ ತಾರತಮ್ಯ ಮಾಡದೇ ಬಡವರಿಗೆ ಮುಟ್ಟಬೇಕಾದ ಯೋಜನೆಗಳನ್ನು ಸರಿಯಾಗಿ ಮುಟ್ಟಿಸಬೇಕು,

ಇಲ್ಲವಾದಲ್ಲಿ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲು ಮುಂದಾಗುತ್ತೇವೆ ಅಂತಾರೆ ಗ್ರಾಮಸ್ತರು. ಅದೇನೇ ಇರಲಿ ಈ ಬಾರಿ ಆರಿಸಿ ಬರುವ ಜನಪ್ರತಿನಿಧಿಗಳಾದರೂ ಫಲಾನುಭಾವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಸರಿಯಾಗಿ ನೀಡುವಲ್ಲಿ ಮುಂದಾಗಬೇಕಿದೆ.

Edited By : Manjunath H D
Kshetra Samachara

Kshetra Samachara

24/12/2020 03:55 pm

Cinque Terre

46.25 K

Cinque Terre

11

ಸಂಬಂಧಿತ ಸುದ್ದಿ