ನವಲಗುಂದ : ನವಲಗುಂದ ಪಟ್ಟಣದಿಂದ ಅಣ್ಣಿಗೇರಿಗೆ ತಲುಪುವ ರಸ್ತೆ ಇದು. ಮೊದಲೇ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಂತಹದ್ರಲ್ಲಿ ರಸ್ತೆ ಬದಿಗೆ ಇರುವ ಈ ಕಂಬಗಳನ್ನೊಮ್ಮೆ ನೋಡಿ ಯಾವ ರೀತಿ ಬಾಗಿವೆ ಅಂತಾ. ಅಪ್ಪಿ ತಪ್ಪಿ ಕಂಬವೇನಾದರೂ ಬಿದ್ದದ್ದೇ ಆದಲ್ಲಿ ವಾಹನ ಸವಾರರಿಗೆ ಅಪಾಯವಂತೂ ಕಟ್ಟಿಟ್ಟ ಬುತ್ತಿ.
ಹೌದು. ಮೊದಲೇ ಈ ರಸ್ತೆಯ ಡಾಂಬರ್ ಕಿತ್ತು ಹೋಗಿ ಹದಗೆಟ್ಟು ಹೋಗಿದೆ. ಇದರಿಂದಲೇ ಇಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾಯದ ಭೀತಿ ಎದುರಾಗಿದೆ. ಅಂತದ್ರಲ್ಲಿ ಈ ಕಂಬಗಳು ಸಹ ಬಾಗಿದ್ದು, ಈಗೋ ಆಗೋ ಎನ್ನುವಂತಿವೆ. ಕೆಲವೊಂದು ಕಂಬಗಳಿಗೆ ಆಧಾರ ಸ್ತಂಭವನ್ನು ಇಡಲಾಗಿದೆ. ಇನ್ನೂ ಕೆಲವು ಕಂಬಗಳು ಹಾಗೇ ಬಾಗಿ ನಿಂತಿವೆ, ಯಾವುದೇ ಅವಘಡ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
Kshetra Samachara
17/12/2020 07:34 pm