ಹುಬ್ಬಳ್ಳಿ- ಮೊದಲೆ ರೋಗಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಚರಂಡಿ ನೀರಿನ ಸೆಪ್ಟಿಕ್ ಟ್ಯಾಂಕ್ ಒಡೆದು, ಈಗ ಮನೆಯ ಪಕ್ಕದಲ್ಲಿ ಹರಿಯುತ್ತಿರುವುಇದರಿಂದ, ಇಲ್ಲಿನ ನಿವಾಸಿಗಳು ತಮ್ಮ ಮನೆಯಲ್ಲಿಯೇ ಮೂಗು ಮುಚ್ವಿಕೊಂಡು ಕೂಡುವಂತ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ಆ ನಗರ ಯಾವುದು ಅಂತಿರಾ ಈ ಸ್ಟೋರಿ ನೋಡಿ.....
ಹೀಗೆ ಮನೆಯ ಮುಂದೆ ಮೂಗು ಮುಚ್ಚೊಕೊಂಡು ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ನವನಗರದ ಕೀರ್ತನಾ ಪಾರ್ಕ್ ನಿವಾಸಿಗಳ ಗೋಳು. ಗಂಗಾಧರ ನಗರ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಸುಮಾರು ಮೂರ್ನಾಲ್ಕು ವರ್ಷಗಳಿಂದ ತುಂಬಿದ್ದರಿಂದ ಒಡೆದು ಹರಿಬಿಟ್ಟಿದ್ದು, ಅದು ಮನೆಗಳ ಪಕ್ಕ ಹರಿಬಿಟ್ಟು ನಿವಾಸಿಗಳಿಗೆ ತೊಂದರೆ ಕೊಟ್ಟಿದ್ದಾರೆ...
ಸೆಪ್ಟಿಕ್ ಟ್ಯಾಂಕ ತುಂಬಿದ ಕೂಡಲೆ ಅದನ್ನು ಕ್ಲೀನ್ ಮಾಡಬೇಕು, ಆದರೆ ಇಲ್ಲಿ ಮಾತ್ರ ತುಂಬಿ ಚರಂಡಿ ನೀರು ಮನೆಯ ಪಕ್ಕ ಅಷ್ಟೇ ಅಲ್ಲದೆ, ಖಾಲಿ ಸೈಟ್ ನಲ್ಲಿ ಚರಂಡಿ ನೀರು ನುಗ್ಗಿ, ಕೆರೆಯಂತಾದರು. ಯಾವುದೇ ಅಧಿಕಾರಿಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂದು ನವಾಸಿಗಳು ಪಬ್ಲಿಕ್ ನೆಕ್ಸ್ಟ್ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ....
ಒಟ್ಟಿನಲ್ಲಿ ನಮ್ಮ ಮಹಾನಗರ ಪಾಲಿಕೆ ಮಾತ್ರ, ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದ್ದರೆ. ಅದೇ ಚರಂಡಿ ನೀರು ಈಗ ಮನೆ ಒಳಗೆ ನುಗ್ಗುವುದು ಖಚಿತ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕೀರ್ತನಾ ಪಾರ್ಕ್ ಮತ್ತು ಸುತ್ತ ಮುತ್ತಲಿನ ನಿವಾಸಿಗಳ ಆರೋಗ್ಯವನ್ನು ಕಾಪಾಡಬೇಕಾಗಿದೆ.....!
Kshetra Samachara
09/12/2020 06:13 pm