ನವಲಗುಂದ: ಎಲ್ಲಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಈಗ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಸರಿಯಾದ ನಿರ್ವಹಣೆ ಅಷ್ಟೇ ಅಲ್ಲದೇ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲದೇ ಈ ರೀತಿ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಎರಡು ಬಸ್ ಗಳು ಸಹ ಸರಿಯಾಗಿ ಹಾದು ಹೋಗಲು ಸ್ಥಳವಿಲ್ಲದೆ ವಾಹನ ಸಂಚಾರಕ್ಕೆ ಅಡೆತಡೆಗಳು ಉಂಟಾಗುತ್ತಿದೆ.
ರಸ್ತೆ ಮೇಲೆ ಕಾರು, ಬೈಕ್ ಸೇರಿದಂತೆ ಕೆಲವೊಮ್ಮೆ ದೊಡ್ಡ ವಾಹನಗಳ ನಿಲುಗಡೆಯಿಂದ ಆಂಬ್ಯುಲೆನ್ಸ್, ಸ್ಥಳೀಯ ಅಂಗಡಿದಾರರು ಸೇರಿದಂತೆ ವಾಹನ ಸವಾರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆಯತ್ತ ಗಮನಹರಿಸಿ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ನೀಡಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಬ್ರೇಕ್ ಹಾಕಬೇಕಿದೆ.
Kshetra Samachara
09/12/2020 01:51 pm