ಕುಂದಗೋಳ : ಪಟ್ಟಣದ ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯದ ದೌರ್ಭಾಗ್ಯ ಕೇಳಿದ್ರೇ ಯಾಕಪ್ಪಾ ? ಇಷ್ಟು ಹಣ ವ್ಯರ್ಥ ಮಾಡಿ ಈ ಶೌಚಾಲಯ ಕಟ್ಟಿಸಬೇಕು, ನಿರ್ವಹಣೆಯೆ ಕಷ್ಟವಾದಾಗ ಎಂದು ಇಲ್ಲಿನ ಜನರೇ ಪಟ್ಟಣ ಪಂಚಾಯಿತಿಗೆ ಟೀಕೆ ಮಾಡ್ತಾ ಇದ್ದಾರೆ.
ಇದೋ ಈ ಕುಂದಗೋಳ ಪಟ್ಟಣದ ತಹಶೀಲ್ದಾರ ಕಚೇರಿ ಹಾಗೂ ಕೋರ್ಟ್ ಸೇರಿ ಪಟ್ಟಣ ಪಂಚಾಯಿತಿ ಮಳಿಗೆಗಳ ರಸ್ತೆಗೆ ಹೊಂದಿಕೊಂಡಿರುವ ಈ ಶೌಚಾಲಯ ಸಾರ್ವಜನಿಕ ಉಪಯೋಗಕ್ಕೆ ದೂರವಾಗಿದೆ. ಕಾರಣ ಈ ಶೌಚಾಲಯ ನಿರ್ವಹಣೆ ಮಾಡೋ ಸಿಬ್ಬಂದಿಗೆ ಸರಿಯಾದ ವೇತನ ದೊರಕಿಲ್ಲ, ತಿಂಗಳಿಗೆ 3 ಸಾವಿರ ವೇತನದಲ್ಲಿ ಪಟ್ಟಣ ಪಂಚಾಯಿತಿ ಅರ್ಧ ಬರ್ಧಂ ಪಾವತಿ ಮಾಡುತ್ತೆ ನಾನಾದ್ರೂ ಹೇಗೆ ಸಾರ್ ಜೀವನ ಮಾಡ್ಲಿ ಸರಿಯಾಗಿ ಹಣ ಕೊಟ್ರೇ ಕೆಲಸಾ ಮಾಡತೇನಿ ಎಂತಾರೆ ಶೌಚಗೃಹದ ನಿರ್ವಹಣೆಗಾರ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನ ಕೇಳಿದ್ರೆ ಕಟ್ಟಡ ಚೆನ್ನಾಗಿದೆ. ಆದ್ರೆ ಸಿಬ್ಬಂದಿಗಳಿಗೆ ವೇತನದ ಸಮಸ್ಯೆ ಎದುರಾಗಿದೆ ಈ ವಾರದಲ್ಲಿ ಸಮಸ್ಯೆ ಬಗೆಹರಿಸಿ ಶೌಚಾಲಯ ಪುನರಾರಂಭ ಮಾಡ್ತಿವಿ ಎಂತಾರೆ.
ಒಟ್ಟಾರೆ ಸತತ 6 ತಿಂಗಳಿಂದ ಬಂದ್ ಆಗಿ ಸಾರಾಯಿ ಕುಡುಕರು, ದಮ್ಮ್ ಹೊಡೆಯುವವರ ಅಡ್ಡೆಯಾಗಿರುವ ಶೌಚಾಲಯ ಸ್ವಚ್ಚತೆ ಭಾಗ್ಯ ಕಂಡು ನಿತ್ಯ ಕಚೇರಿಗೆ ಹಾಗೂ ಬಸ್ ನಿಲ್ದಾಣಕ್ಕೆ ಬರೋ ಸಾರ್ವಜನಿಕರು ಹಾಗೂ ಕಾಲೇಜು ಮಕ್ಕಳು, ವಿದ್ಯಾರ್ಥಿನಿಯರು, ಮಹಿಳೆಯರಿಗೆ ಅನುಕೂಲವಾಗಬೇಕಿದೆ.
Kshetra Samachara
07/12/2020 04:48 pm