ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ :ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹಳ್ಳಿಕೇರಿ ಮುಖ್ಯ ರಸ್ತೆ

ಅಣ್ಣಿಗೇರಿಯಿಂದ ಹಳ್ಳಿಕೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹಾಳಾಗಿ ಸುಮಾರು ವರ್ಷಗಳು ಕಳೆದರೂ ಕೂಡಾ ಸಂಭಂದಿಸಿದ ಅಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಿಲ್ಲ.

ರಸ್ತೆ ಕೆಳಭಾಗದಲ್ಲಿ ಮಳೆಯ ಅವಾಂತರದಿಂದ ಮಣ್ಣು ಕೊಚ್ವಿಕೊಂಡು ಹೋಗಿ ಅಪಘಾತಕ್ಕೆ ಕೈ ಮಾಡಿ ಆಹ್ವಾನ ನೀಡುತ್ತಿದ್ದರೂ ಕೂಡಾ ಸ್ಥಳೀಯ ಆಡಳಿತವಾಗಲಿ ಅಥವಾ ತಾಲೂಕಾಡಳಿತವಾಗಲಿ ಈ ರಸ್ತೆ ಗೆ ದುರಸ್ತಿ ಭಾಗ್ಯ ಕಲ್ಪಿಸದೇ ಇರುವದು ದುರದೃಷ್ಟವಕಾಶ ಎಂದು ಹಳ್ಳಿಕೇರಿ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.

ರಸ್ತೆ ಹಾಳಾಗಲಿಕ್ಕೆ ಕಳಪೆ ಗುಣಮಟ್ಟದ ಕಾಮಗಾರಿಯೆ ಮುಖ್ಯ ಕಾರಣ ಎಂದು ಸ್ಥಳೀಯರು ಈ ಸಂದರ್ಭದಲ್ಲಿ ಆರೋಪಿಸಿದರು. ಇನ್ನೂ ಮುಂದಾದರು ಸಂಭಂದಿಸಿದ ಅಧಿಕಾರಿಗಳು ಈ ರಸ್ತೆಕಡೆ ಸ್ವಲ್ಪ ಗಮನ ಹರಿಸಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ದುರಸ್ತಿಗೊಳಿಸಿ ಅಪಘಾತ ತಪ್ಪಿಸುವಲ್ಲಿ ತಲ್ಲಿನರಾಗಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

06/12/2020 04:59 pm

Cinque Terre

47.35 K

Cinque Terre

0

ಸಂಬಂಧಿತ ಸುದ್ದಿ