ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಳ್ಳು ಕಂಟಿಗಳಿಂದ ಕೂಡಿದ ರುದ್ರ ಭೂಮಿ! ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳು ರುದ್ರ ಭೂಮಿ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಜೀವಂತ ಇದ್ದರು ಯಾವುದೇ ಮೂಲ ಸೌಕರ್ಯಗಳು ಸಿಗದ ಈ ನಗರದಲ್ಲಿ, ಸತ್ತ ಮೇಲೂ ಶವ ಸಂಸ್ಕಾರವನ್ನು ಮುಳ್ಳು ಕಂಟಿಯಲ್ಲಿ ಮಾಡುವಂತಹ ಪರಿಸ್ಥಿತಿ ಕಂಡು ಬಂದಿದ್ದು ದೀ ಗ್ರೇಟ್ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ.....

ಹೀಗೆ ಆ ಗ್ರಾಮದ ಜನರು ರುದ್ರ ಭೂಮಿಯಲ್ಲಿ ನಿಂತು, ತಮ್ಮ ಸಮಸ್ಯೆಗಳನ್ನು ಹೇಳುತ್ತಿರುವುದು ನಗರದ ಬಿಡ್ನಾಳ ಗ್ರಾಮದಲ್ಲಿ. ಸುಮಾರು 7 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಈ ರುದ್ರ ಭೂಮಿ, ಯಾವುದೇ ಮೂಲ ಸೌಕರ್ಯಗಳು ಇಲ್ಲದೆ. ಕಾಡಿನಂತೆ ಈ ರುದ್ರ ಭೂಮಿ ಕಾಣುತ್ತಿದೆ. ಈ ಗ್ರಾಮದ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟೋ ಬಾರಿ ಮನವಿ ಕೊಟ್ಟರು ಕೂಡ, ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ, ಕಿಡಿ ಕಾರುತ್ತ, ಪಬ್ಲಿಕ್ ನೆಕ್ಸ್ಟ್ ಮೂಲಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ....

ಇಲ್ಲಿ ಬಿಡ್ನಾಳ, ಇಂಧಿರಾ ನಗರ, ಹೂಗಾರ ಓಣಿ, ಬಂಕಾಪೂರ ಚೌಕ್, ಎಸ್ ಎಮ್ ಕೃಷ್ಣನಗರ, ಕರಕಿ ಬಸವೇಶ್ವರ ನಗರ, ಕಮರೀಪೇಟ ಸೇರಿದಂತೆ ಹುಬ್ಬಳ್ಳಿಯ ಹಲವಾರು ಪ್ರದೇಶದ ನಿವಾಸಿಗಳು ಈ ರುದ್ರ ಭೂಮಿಯಲ್ಲಿಯೇ ಶವ ಸಂಸ್ಕಾರ ಮಾಡುಲು ಬರುತ್ತಾರೆ. ಆದರೆ ಇಲ್ಲಿನ ವ್ಯವಸ್ಥೆ ಮಾತ್ರ ಶೂನ್ಯ. ಅಗಲವಾದ ರಸ್ತೆ ಇಲ್ಲ. ಇದ್ದರು ಗಿಡ ಕಂಟಿಗಳು ಬೆಳೆದು ನಡು ರಸ್ತೆಯಲ್ಲಿಯೇ ಬಂದಿವೆ. ಶವ ತರಬೇಕಾದರೆ ಇಲ್ಲಿನ ಜನ ಹರಸಾಹಸ ಪಡುವಂತಾಗಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿರುವ ನಮ್ಮ ಹು-ಧಾ ಮಹಾನಗರ ಪಾಲಿಕೆ ಮಾತ್ರ, ಜನತೆಗೆ ಸೂಕ್ತವಾದ ಸೌಲಭ್ಯ ದೊರಕಿಸಿ ಕೊಡುವುದರಲ್ಲಿ ಶೂನ್ಯ ಕಂಡುಬರುತ್ತಿದೆ. ಆದಷ್ಟು ಬೇಗ ಸಂಬಂಧಿಸಿದ ಅಧಿಕಾರಿಗಳು ಈ ರುದ್ರ ಭೂಮಿಯನ್ನು ಸೂಕ್ತ ಮಟ್ಟಕ್ಕೆ ತರಬೇಕೆಂದು ಇಲ್ಲಿನ ನಿವಾಸಿಗಳ ಮನವಿಯಾಗಿದೆ.......!

Edited By : Nagesh Gaonkar
Kshetra Samachara

Kshetra Samachara

05/12/2020 07:45 pm

Cinque Terre

66.33 K

Cinque Terre

3

ಸಂಬಂಧಿತ ಸುದ್ದಿ