ಅಣ್ಣಿಗೇರಿ : ಈ ಮಂಜಿಗುಡ್ಡ ಗ್ರಾಮಕ್ಕೆ ಸಂಪರ್ಕ ಮಾಡೋ ಮುಖ್ಯರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳು ಹಳ್ಳದ ಎಡೆಗೆ ವಾಲಿದ್ರೂ ಇಂದಿಗೂ ಹೆಸ್ಕಾಂ ಅಧಿಕಾರಿಗಳು ಪರಿಗಣಿಸದೆ ಸುಮ್ನೇ ಇರೋದು ಮುಂದಾಗುವ ವಿದ್ಯುತ್ ಅವಘಡಕ್ಕೆ ಮುನ್ಸೂಚನೆ ನೀಡಿದಂತಿದೆ.
ಇದೋ ಅಣ್ಣಿಗೇರಿ ತಾಲೂಕಿನ ಮಂಜಿಗುಡ್ಡ ಗ್ರಾಮಕ್ಕೆ ಅಣ್ಣಿಗೇರಿಯಿಂದ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಹೊರಟ್ರೇ ಹುಷಾರ್. ಯಾಕಂದ್ರೇ ರಸ್ತೆ ಬದಿ ನಿಲ್ಲಿಸಿದ ವಿದ್ಯುತ್ ಕಂಬಗಳು ಹಳ್ಳ ಎಡೆಗೆ ವಾಲಿದ್ದು, ವಿದ್ಯುತ್ ಪ್ರವಾಹಕ ತಂತಿಗಳು ಗಿಡ ಮರಗಳಿಗೆ ತಾಗುತ್ತಿವೆ. ಪಕ್ಕದ ಹೊಲಗಳ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಭಯ ಉಂಟಾಗಿದೆ.
ಈ ರಸ್ತೆ ಸಂಚಾರಿಗಳು ಸ್ವಲ್ಪ ಯಾಮಾರಿ ರಸ್ತೆ ಬಿಟ್ಟು ವಾಹನ ಪಕ್ಕಕ್ಕೆ ತಗೊಂಡ್ರು, ಈ ವಿದ್ಯುತ್ ವಯರ್ ನಿಮ್ಮ ವಾಹನ ಆಕರ್ಷಿಸದಿರಲು ಸಾಧ್ಯವಿಲ್ಲ. ಈ ಬಾರಿಯ ಅತಿವೃಷ್ಟಿ ಪರಿಣಾಮ ಭೂಮಿಯಲ್ಲಿ ಹೆಚ್ಚು ನೀರು ಹರಿದ ಮಣ್ಣು ಜಾರಿ ಕಂಬಗಳು ಈ ಹಂತ ತಲುಪಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಅಪಾಯ ಸೃಷ್ಟಿಸುವ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನ ನೆಟ್ಟಗೆ ನೆಲ್ಲಿಸಿದ್ರೇ ಒಳಿತು ಎಂಬುದು ಜನಾಭಿಪ್ರಾಯ.
Kshetra Samachara
05/12/2020 04:58 pm