ಅಣ್ಣಿಗೇರಿ : ಸಾರ್ವಜನಿಕರ ಅನುಕೂಲತೆಗಾಗಿ ಸರ್ಕಾರ ನೂತನವಾಗಿ ಆರಂಭಿಸಿದ ಸಕಾಲ ಸೇವೆಗಳ ಕುರಿತು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್.ಕಟಗಿ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಜಾಥಾ ಹಮ್ಮಿಕೊಳ್ಳುವ ಮೂಲಕ ತಿಳುವಳಿಕೆ ನೀಡಲಾಯಿತು.
ಸಕಾಲ ಯೋಜನೆಯಲ್ಲಿ 12 ವಿಧದ ಕೆಲಸ ಕಾರ್ಯಗಳನ್ನು ನಿಗಧಿತ ಸಮಯದೊಳಗೆ ಮಾಡಿಕೊಳ್ಳಬಹುದು.
ತಮ್ಮ ಕೆಲಸವನ್ನು ಮಾಡಿಕೊಳ್ಳಲು ಸಾರ್ವಜನಿಕರು ಪುರಸಭೆಯ ತಂತ್ರಾಂಶದಲ್ಲಿ ದಾಖಲಿಸಿ ತಮ್ಮ ಕಾರ್ಯವನ್ನು ಪಡೆದುಕೊಳ್ಳ ಬಹುದು ಎಂದು ಜಾಥಾ ಮೂಲಕ ಪ್ರಚಾರ ಮಾಡಲಾಯಿತು.
Kshetra Samachara
03/12/2020 05:59 pm