ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನಿರ್ವಹಣೆ ಇಲ್ಲದ ನೀರು ಶುದ್ಧೀಕರಣ ಘಟಕಗಳ ಪ್ರಾರಂಭ ಯಾವಾಗ ?

ಕಲಘಟಗಿ:ತಾಲೂಕಿನ ಹಿಂಡಸಗೆರಿ ಗ್ರಾಮದ ನೀರು ಶುದ್ಧೀಕರಣ ಘಟಕ ನಿರ್ವಹಣೆ ಇಲ್ಲದೆ ಹಾಳಾಗಿದ್ದು, ಗ್ರಾಮದ ಜನರಿಗೆ ಸವಳು ನೀರೇ ಗತಿ ಎನ್ನುವಂತಾಗಿದೆ.ಶುದ್ದೀಕರಣ ಘಟಕ ಹಾಳಾಗಿ ಹಲವು ದಿನಗಳಾದರು ಸರಿಪಡಿಸದೇ ಇರುವ ಕಾರಣ ಗ್ರಾಮಸ್ಥರು ಕೊಳವೆ ಬಾವಿ ನೀರನ್ನು ಕುಡಿಯ ಬೇಕಿದೆ.

ತಾಲೂಕಿನ ಹಲವು ಗ್ರಾಮಗಳಲ್ಲಿ ಇಂತಹ ಶುದ್ದೀಕರಣ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.ಜನರ ಆರೋಗ್ಯ ಹಾಳಾಗುವ ಮುನ್ನ ಶುದ್ಧೀಕರಣ ಘಟಕವನ್ನು ಸಂಬಂಧಪಟ್ಟ ಇಲಾಖೆಯವರು ಶೀಘ್ರ ಸರಿಪಡಿಸಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುವುದು ತೀರಾ ಅನಿವಾರ್ಯವಾಗಿದೆ.

Edited By : Manjunath H D
Kshetra Samachara

Kshetra Samachara

29/11/2020 12:56 pm

Cinque Terre

39.03 K

Cinque Terre

0

ಸಂಬಂಧಿತ ಸುದ್ದಿ