ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಳ್ಳ ಹಿಡಿದಿವೆ ಈ ಹಳ್ಳಿಗಳನ್ನ ಸಂಪರ್ಕ ಮಾಡೋ ಒಳ ರಸ್ತೆಗಳು

ಕುಂದಗೋಳ : ತಮ್ಮೂರಿಗೆ ರಸ್ತೆ ಬೇಕು, ಕುಡಿಯಲು ನೀರು ಬೇಕು ಮೂಲ ಸೌಕರ್ಯಗಳು ಬೇಕು ಎಂದು ಜನಪ್ರತಿಗಳಿಗೆ ಮತ ನೀಡೋ ಈ ಮತದಾರರ ಗ್ರಾಮಕ್ಕೆ ಇಂದಿಗೂ ಸಹ ಸೂಕ್ತ ರಸ್ತೆಗಳ ಸೌಲಭ್ಯ ಕಲ್ಪಿಸುವಲ್ಲಿ ಈ ಜನಪ್ರತಿನಿಧಿಗಳು ಸೋತಿದ್ದಾರೆ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಈ ಬೆನಕನಹಳ್ಳಿಯಿಂದ ಸಂಪರ್ಕ ಕಲ್ಪಿಸುವ 3 ಕಿ.ಮೀ ರಸ್ತೆ ದುಸ್ಥಿತಿ ನೋಡಿದ್ರೆ ನಿಮ್ಗೆ ಗೊತ್ತಾಗುತ್ತೆ. ಈ ಬೇಸಿಗೆಯಲ್ಲಿ ಹೀಗೆ ಒಣಗಿ ಮಣ್ಣು, ಕಲ್ಲು ಮುಳ್ಳು ತುಂಬಿರೋ ರಸ್ತೆ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಕ್ಲೋಸ್ ಆಗಿರುತ್ತದೆ.

ಈ ರಸ್ತೆಗೆ ಹೊಂದಿಕೊಂಡಿರುವ ಹಳ್ಳದ ಕೋಣ ಸರವು ಸುತ್ತಲಿನ ಪ್ರದೇಶದಿಂದ ನೀರು ಮಣ್ಣಿನ ಸಮೇತ ರಸ್ತೆಗೆ ಹೊಂದಿಕೊಂಡು ಹರಿಯುವ ಕಾರಣ ಹಳ್ಳದ ನೀರು ದಾಟಲು ಅಳವಡಿಸಿದ್ದ ಸಿಮೆಂಟ್ ಪೈಪ್ ಮಾರುದ್ದ ದೂರ ಹೋಗಿ ಬಿದ್ದಿವೆ. ಹಳ್ಳದಲ್ಲಿ ಬೆಳೆದ ಮುಳ್ಳು ಕಂಟಿ ರಸ್ತೆ ಸಂಚಾರಕ್ಕೆ ಕಂಟಕವಾಗಿದ್ದು, ಜನ ಈ ರಸ್ತೆ ನೋಡಿ ಬೇಸತ್ತು ಹೊಲಗಳಿಗೆ ಹೋಗಲು ಬೇರೆ ದಾರಿ ಹಿಡಿದಿದ್ದಾರೆ.

ಈ ಬಗ್ಗೆ ಕೆಲ ಜನ ಹೇಳೋ ಪೈಕಿ ಕಾಮಗಾರಿ ಮಂಜೂರಾದ್ರೂ ಕೆಲಸ ಆರಂಭಿಸಿಲ್ಲ ಎನ್ನುತ್ತಿದ್ದಾರೆ. ಶೀಘ್ರದಲ್ಲೇ ಈ ರಸ್ತೆ ಸುಧಾರಿಸಬೇಕಿದೆ.

Edited By : Manjunath H D
Kshetra Samachara

Kshetra Samachara

26/11/2020 03:46 pm

Cinque Terre

21.36 K

Cinque Terre

2

ಸಂಬಂಧಿತ ಸುದ್ದಿ