ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲ್ಯ ವಿವಾಹ ಬೇಡ: ಮಕ್ಕಳಿಗೆ ಶಿಕ್ಷಣ ನೀಡಿ ಜಾಗೃತರಾಗಿ

ಹುಬ್ಬಳ್ಳಿ: ಮಕ್ಕಳ ದಿನಾಚರಣೆ ನಿಮಿತ್ತವಾಗಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಬಾಲ್ಯ ವಿವಾಹ ಜಾಗೃತಿ ಕಾರ್ಯಕ್ರಮವನ್ನು ಬೆಳಗಾವಿಯ ಧರ್ಮ ಕ್ರಾಂತಿಯ ಸಮಾಜ ಸೇವಾ ಮಕ್ಕಳ ಸಹಾಯವಾಣಿ 1098 ಧಾರವಾಡ ಶಾಖೆಯಿಂದ ನಡೆಸಲಾಯಿತು.

ನಗರದ ಮದುವೆ ಹಾಲ್, ಚರ್ಚ್,ಮಸೀದಿ ದೇವಸ್ಥಾನ ಸೇರಿದಂತೆ ವಿವಿಧ ಕಡೆಗಳಲ್ಲಿ ಸಂಚರಿಸಿ ಮಕ್ಕಳ ಜಾಗೃತಿಯ ಕುರಿತು ಪೋಸ್ಟರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಸಿಬ್ಬಂದಿ ರವಿ ಭಂಡಾರ, ಜಯಶ್ರೀ ಪೇಸ್, ವಿಠ್ಠಲ ವಟವಟಿ, ಆನಂದ ಸವಣೂರು, ಊಮಾ ರೊಟಿಗಿವಾಡ ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

19/11/2020 05:53 pm

Cinque Terre

10.48 K

Cinque Terre

1

ಸಂಬಂಧಿತ ಸುದ್ದಿ