ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯಕೀಯಯ ಸಿಬ್ಬಂದಿ ಕೆಲಸ ಶ್ಲಾಘನೀಯ: ನ್ಯಾಯಾಧೀಶ ಏ.ಕೆ. ನಾಗರಾಜಪ್ಪ

ಹುಬ್ಬಳ್ಳಿ: ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ನಿರ್ವಹಿಸಿದ ಕೆಲಸ ಶ್ಲಾಘನೀಯವಾದುದು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ನಾಗರಾಜಪ್ಪ.ಎ.ಕೆ ಹೇಳಿದರು.

ಹುಬ್ಬಳ್ಳಿ ಗೋಕುಲ ರಸ್ತೆಯ ಬಸವೇಶ್ವರ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 18 ಬುಧವಾರದಂದು ಆಯೋಜಿಸಲಾದ ಕೊವೀಡ್ -19 ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವೈದ್ಯಕೀಯ ಸಿಬ್ಬಂದಿ ಆತ್ಮ ಹಾಗೂ ಪರಮಾತ್ಮ ಮೆಚ್ಚುವ ಕಾರ್ಯ ಮಾಡಿದ್ದಾರೆ. ಕಲುಶಿತ ನೀರಿನಲ್ಲಿ ಅಡಗಿತ ಮುತ್ತುಗಳು ಕಾಣುವುದಿಲ್ಲ. ಹಾಗೆಯೇ ವೈದ್ಯಕೀಯ ಸಿಬ್ಬಂದಿ ಕಾರ್ಯ ಸಮಾಜದ ದೃಷ್ಟಿಯಿಂದ ಮರೆಯಾಗಿದೆ. ಇವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ತಾಲ್ಲೂಕು ಕಾನೂನು ಸೇವಾ ಮಾಡಿದೆ. ಜನರು ಸಾಮಾಜಿಕ ಅಂತರ ಕಾಪಡಿಕೊಂಡು ವ್ಯವಹರಿಸಬೇಕು. ಮಾಸ್ಕ ಧರಿಸಬೇಕು. ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಲಾಯಿತು.

Edited By : Nagaraj Tulugeri
Kshetra Samachara

Kshetra Samachara

19/11/2020 05:39 pm

Cinque Terre

9.71 K

Cinque Terre

0

ಸಂಬಂಧಿತ ಸುದ್ದಿ