ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿರ್ಮಾಣ ವೆಚ್ಚ ಆಕಾಶಕ್ಕೆ : ಸೂರು ನಂಬಿದ ಬಡವರ ಕನಸು ನುಚ್ಚುನೂರು

ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ

ಹುಬ್ಬಳ್ಳಿ- ಕಟ್ಟಡ ನಿರ್ಮಾಣದ ಕಾಮಗಾರಿಗಳು ಬೆಲೆ ಏರಿಕೆ‌ಯಿಂದ, ಅರ್ಧಕ್ಕೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಸಲಕರಣೆಗಳಾದ ಸಿಮೆಂಟ್‌ ಮತ್ತು ಸ್ಟೀಲ್‌, ಕೂಲಿ ಕಾರ್ಮಿಕರ ಸಂಬಳ ಹೆಚ್ಚಳದ ಬಿಸಿ, ರಿಯಲ್ ಎಸ್ಟೆಟ್ ಉದ್ಯಮ ಹಾಗೂ ಸ್ವಂತ ಮನೆ ಕಟ್ಟಿಕೊಳ್ಳುವವರ ಮೇಲೆ ಬಿದ್ದಿದೆ. ಮನೆಗಳನ್ನು ಬೇಗ ಮುಗಿಸಿಕೊಂಡು ನೆಮ್ಮದಿ ಕಾಣುವ ದಾವಂತದಲ್ಲಿರುವವರಿಗೆ ಬೆಲೆ ಬಿಸಿ ತಾಕಿದೆ.....

ಲಾಕ್‌ಡೌನ್‌ಗೂ ಮುನ್ನ, ಎಲ್ಲ ಕಂಪನಿಗಳ ಎ ಗ್ರೇಡ್‌ ಸಿಮೆಂಟ್‌ ಬೆಲೆ 280-300 ಬೆಲೆಯಿತ್ತು. ಲಾಕ್‌ಡೌನ್‌ ಸಡಿಲಿಕೆ ನಂತರ ಇದೇ ಎ ಗ್ರೇಡ್‌ ಸಿಮೆಂಟ್‌ ಪ್ರತಿ ಚೀಲಕ್ಕೆ 400 ರಿಂದ 420 ರೂ.ಗೆ ಏರಿಸಲಾಗಿದೆ. 240 ರಿಂದ 250 ರೂ. ಇದ್ದ ಬಿ ಮತ್ತು ಸಿ ಗ್ರೇಡ್‌ ಸಿಮೆಂಟ್‌ ಬೆಲೆ ಈಗ 360 ರಿಂದ 380 ರೂ. ಆಗಿದೆ. ಸಿಮೆಂಟ್‌ ಬೆಲೆ ಇದ್ದಕ್ಕಿದ್ದಂತೆ ನೂರು ರೂ.ಗಿಂತ ಹೆಚ್ಚು ಏರಿಕೆಯಾಗಿದೆ. ಕಬ್ಬಿಣದ ಬೆಲೆ ಕೂಡ ಏರಿಕೆಯಾಗಿದೆ. ಲಾಕ್‌ಡೌನ್‌ಗೂ ಮುನ್ನ ಎಲ್ಲ ಕಂಪನಿಗಳ ಸ್ಟೀಲ್‌ ರೇಟ್‌ 46ರಿಂದ 62 ರೂ. ಇದ್ದ ಬೆಲೆ 48ರಿಂದ 64 ರೂ. ಆಗಿದೆ. ಪ್ರತಿ ಟನ್‌ಗೆ 2500ರೂ. ನಿಂದ 3000 ರೂ. ಏರಿಕೆಯಾಗಿದೆ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಉತ್ಪಾದನೆ ಆರಂಭ ಆಗಿದ್ದರೂ ಕಚ್ಚಾ ವಸ್ತುಗಳು, ಟ್ರಾನ್ಸ್‌ಪೋರ್ಟ್‌, ಕಾರ್ಮಿಕರ ಕೊರತೆ ತಲೆದೋರಿದೆ. ಹಾಗಾಗಿ ಬೆಲೆ ಏರಿಕೆಯಾಗಿದ್ದು, ಯಾವುದೇ ಡಿಸ್ಕೌಂಟ್‌ ಕೂಡ ಇಲ್ಲ. ಹೀಗಾಗಿ ಕಟ್ಟಡ ಕಾಮಗಾರಿಗಳಿಗೆ ಬಾರಿ ಹೊಡೆತ ಬಿದಿದ್ದು ಮಂದಗತಿಯಲ್ಲಿ ನಡೆಯುತ್ತಿವೆ.

ದೊಡ್ಡ ಸಣ್ಣ ಕಂಟ್ರಾಕ್ಟರ್‌, ಬಿಲ್ಡರ್‌ಗಳಿಗೆ ಇದು ಹೆಚ್ಚಿನ ಹೊರೆಯಲ್ಲದಿದ್ದರೂ, ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ನೆತ್ತಿ ಮೇಲೊಂದು ಸೂರು ಕಟ್ಟಿಕೊಳ್ಳಲು ಹೊರಟ ಮಧ್ಯಮ, ಬಡ ವರ್ಗದ ಮಂದಿ, ನೌಕರರು ಮಾತ್ರ ಬೆಲೆ ಏರಿಕೆಯಿಂದ ತತ್ತರಿಸಲಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಎಷ್ಟೋ ಮಂದಿ ತತ್ತರಿಸುತ್ತಿದ್ದಾರೆ. ಇಂತಹ ಹೊತ್ತಲ್ಲಿ ಅರ್ಧಕ್ಕೆ ನಿಂತಿದ್ದ ತಮ್ಮ ಮನೆಗಳನ್ನು, ಬೇಗ ಮುಗಿಸಿಕೊಂಡು ಹೊಸ ಮನೆ ಸೇರುವ ಧಾವಂತದಲ್ಲಿರುವವರು ದುಬಾರಿ ಬೆಲೆ ತೆರುವಂತಾಗಿದೆ.....!

Edited By : Nagesh Gaonkar
Kshetra Samachara

Kshetra Samachara

17/11/2020 03:12 pm

Cinque Terre

36 K

Cinque Terre

4

ಸಂಬಂಧಿತ ಸುದ್ದಿ