ಕುಂದಗೋಳ : ತಾಲೂಕಿನ ಶಿರೂರು ಗ್ರಾಮದ ಅಂಬೇಡ್ಕರ್ ಓಣಿಯ ಕಾಂಕ್ರೀಟ್ ರಸ್ತೆಗೆ ಸೂಕ್ತ ಚರಂಡಿ ನಿರ್ಮಿಸದ ಕಾರಣ ಜನರು ಬಳಸಿದ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ, ಈ ಕಾರಣ ಜನರಿಗೆ ತೊಂದರೆ ಉಂಟಾಗಿದ್ದು ರಸ್ತೆ ಪಕ್ಕದ ಮರಿಯಮ್ಮದೇವಿ ದೇವಸ್ಥಾನಕ್ಕೆ ಆಗಮಿಸುವ ಜನರು ಗಲೀಜು ನೀರು ತುಳಿದೆ ದೇವಸ್ಥಾನಕ್ಕೆ ಆಗಮಿಸುವ ಕಾರಣ ಸಮಸ್ಯೆ ತೀವ್ರವಾಗಿದೆ.
ಇನ್ನು ಇದೇ ಕಾಂಕ್ರೀಟ್ ರಸ್ತೆಗೆ ಹೊಂದಿಕೊಂಡಿರುವ ಸಿಡಿ ಕುಸಿದು ತಗ್ಗು ಬಿದ್ದಿದ್ದು ಓಣಿಯಲ್ಲಿ ಓಡಾಟುವ ವಯೋವೃದ್ಧರು, ಮಕ್ಕಳು, ಅಂಗವಿಕಲರಿಗೆ ನಿತ್ಯ ಓಡಾಡಲು ಕಷ್ಟವಾಗುತ್ತಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ರಸ್ತೆಗೆ ಚರಂಡಿ ನಿರ್ಮಿಸಿ ತಗ್ಗು ಬಿದ್ದಿರುವ ಸಿಡಿ ಮರು ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿ ಪಬ್ಲಿಕ್ ನೆಕ್ಸ್ಟ್ ಗೆ ಸ್ವತಃ ಗ್ರಾಮಸ್ಥರೇ ವಿಡಿಯೋ ಕಳುಹಿಸಿದ್ದಾರೆ.
Kshetra Samachara
07/11/2020 08:07 pm