ಕುಂದಗೋಳ : ಕಳೆದ ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿರ್ಮಿಸಿದ ಹಳೆಯ 200 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮಿನ ಅವಸಾನವೇ ಅಧಿಕಾರಿಗಳಿಗೆ ತಲೆ ಬಿಸಿ ತಂದಿದೆ.
ಹೌದು ! ಈ ಹಳೆ ಗೋದಾಮು ಈ ಹಿಂದೆ ರೈತರಿಗೆ ಉಪಯೋಗಕ್ಕೆ ಸೀಮಿತವಾಗಿತ್ತು. ಪ್ರಸಕ್ತ ಈ ಗೋದಾಮು ಅವಸಾನದ ಅಂಚಿನಲ್ಲಿದ್ದು ಗೋದಾಮು ಸುತ್ತ ಮುತ್ತ ರೈತಾಪಿ ಚಟುವಟಿಕೆ ಕೈಗೊಳ್ಳವ ಹಾಗೂ ವಾಹನ ಸಂಚಾರಕ್ಕೆ ಭಯ ತಂದೊಡ್ಡಿದೆ.
ಈ ಕಾರಣ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಗೋದಾಮು ನೆಲಸಮ ಮಾಡಲು ಮುಂದಾಗಿದೆ. ಸರ್ಕಾರಿ ಇಂಜಿನಿಯರ್ ಒಂದು ಲಕ್ಷ ಮೊತ್ತವನ್ನು ಗೋದಾಮು ನೆಲಸಮ ಮಾಡಲು ಲೆಕ್ಕಾಚಾರ ಹಾಕಿದ್ದಾರೆ. ಆದ್ರೇ, ಇಷ್ಟು ಹಣ ನೀಡಲು ಯಾವ ಟೆಂಡರ್'ದಾರರು ಮನಸ್ಸು ಮಾಡುತ್ತಿಲ್ಲ.
ಇದಲ್ಲದೇ ಗೋದಾಮು ಹಿಂದೆ ಜನ ಕಸ, ಕಡ್ಡಿ ಇತರೆ ತ್ಯಾಜ್ಯ ಹಾಕುತ್ತಿದ್ದು, ಗಾಳಿ ಮಳೆಗೆ ಗೋಡೌನ್ ತಗಡು ಹಾರುತ್ತಿದ್ದು ಯಾವಾಗ ಏನು ಅನಾಹುತ ಸೃಷ್ಟಿಯಾಗುತ್ತೋ ತಿಳಿಯದು ಈ ಬಗ್ಗೆ ಶೀಘ್ರ ಹರಾಜು ಪ್ರಕ್ರಿಯೆ ನಡೆಸಿ ಗೋದಾಮು ನೆಲಸಮ ಮಾಡಲಿ ಎನ್ನುವುದು ಜನರ ಅಭಿಪ್ರಾಯ.
Kshetra Samachara
22/04/2022 09:20 pm