ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೃಷಿ ಹೊಂಡ ಅಧ್ಯಯನಕ್ಕೆ ಕೇಂದ್ರ ತಂಡ ಆಗಮನ

ನವಲಗುಂದ: ದೇಶಪಾಂಡೆ ಫೌಂಡೇಶನ್ ರೈತ ಕೃಷಿ ಹೊಂಡದ ಅಧ್ಯಯನಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ನೇತೃತ್ವದಲ್ಲಿ ಕೇಂದ್ರ ಅಧ್ಯಯನ ತಂಡ, ನವಲಗುಂದ ಪಟ್ಟಣದ ಲೋಕನಾಥ ಗೋವಿಂದಪ್ಪ ಹೆಬಸೂರ ಮತ್ತು ಹರಿಕೃಷ್ಣ ಲೋಕನಾಥ ಹೆಬಸೂರ ಅವರ ಪೇರಲ ತೋಟಕ್ಕೆ ಭೇಟಿ ನೀಡಿ, ಸಮಾಲೋಚನೆ ನಡೆಸಿತು.

ಅಲ್ಲದೆ, ತಾಲ್ಲೂಕಿನ ಅಮರಗೋಳ, ನಾವಳ್ಳಿ, ಇಬ್ರಾಹಿಂಪುರ, ನಾಗನೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿತು. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರು, ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್ ಹಾಗೂ ಜಿಲ್ಲಾ ಮತ್ತು ತಾಲೂಕು ಕಂದಾಯ ಮತ್ತು ಕೃಷಿ ಅಧಿಕಾರಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

18/03/2022 08:53 pm

Cinque Terre

22.01 K

Cinque Terre

0

ಸಂಬಂಧಿತ ಸುದ್ದಿ