ವಿಶೇಷ ವರದಿ : ಶ್ರೀಧರ ಪೂಜಾರ
ಕುಂದಗೋಳ : ಈ ಸರ್ಕಾರ ಮತ್ತು ಮೇಲಾಧಿಕಾರಿಗಳು ಕುಂದಗೋಳ ಪಟ್ಟಣದ ರೈತ ಸಂಪರ್ಕ ಕೇಂದ್ರದಾಗ ಇರೊ ಸಿಬ್ಬಂದಿ ಬರ ಯಾವಾಗ ತಿರಸ್ತಾರೊ ಗೊತ್ತಿಲ್ಲ.
ಹಿಂಗ್ಯಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಜನರ ಸಂತೆ ಒಳಗ ಕಳೆದ ಹೋಗ್ಯಾರ, ಸ್ವಲ್ಪ ಈ ದೃಶ್ಯ ಗಮನಿಸಿ ಇದರಾಗ ಅಧಿಕಾರಿ ಎಲ್ಲೇ ಅಧಾರ ಹುಡುಕಿ ನೋಡ್ರಿ, ಈ ಪಾಟಿ ರೈತರು ಸೇರಿ ತಮ್ಮ ತಮ್ಮ ಕೆಲ್ಸಾ ಆಗವಲ್ದು ಅಂತ್ ಕಚೇರಿಗೆ ಚಪ್ಪಲಿ ಸವೆಸಿದ್ರೂ, ಇಲ್ಲಿ ಸಿಬ್ಬಂದಿ ಬರ ತೃಪ್ತಿ ಆಗವಲ್ದು, ರೈತರ ಕೆಲ್ಸಾ ಜಲ್ದಿ ಆಗವಲ್ದು.
ಈ ರೈತ ಸಂಪರ್ಕ ಕೇಂದ್ರಕ್ಕೆ ಕಿಸಾನ್ ಸಮ್ಮಾನ್ ಬಂದಿಲ್ಲಾ, ಪೈಪ್ ಅರ್ಜಿ ತಗೋರಿ, ತಾಡಪತ್ರಿ ಯಾವಾಗ ಕೊಡ್ತೀರಿ, ? ಸಬ್ಸಿಡಿ ಯಂತ್ರ ಇನ್ನೂ ಬಂದಿಲ್ಲಾ !, ಎಣ್ಣೆ ಪಂಪ್ ಕೋಡ್ರಿ, ಗೊಬ್ಬರಾ ಕೊಡ್ರಿ, ಬೀಜಾ ಕೊಡ್ರಿ, ಔಷಧಿ ಕೊಡ್ರೀ, ಹಿಂಗ್ ನಾನಾ ಕೆಲ್ಸಾ ಹೊತ್ತು ಬರೋ ಕುಂದಗೋಳ ಹೋಬಳಿ 31 ಹಳ್ಳಿ ರೈತರು ಈ ಪಾಟಿ ಕೊರೊನಾ ನಿಯಮ ಮೀರಿ ಅಧಿಕಾರಿಗಳನ್ನ ಸುತ್ತವರಿದ್ರೂ ಸರ್ಕಾರ ದಾದ ನಹಿ,,, ಪಿರಾದ ನಹಿ,,, ನಡ್ರೀ.
ನೋಡ್ರಿ ಜಿಲ್ಲಾಧಿಕಾರಿಗಳೇ ಅನ್ನದಾತನ ಇಲಾಖೆ ಈ ಸಂಪರ್ಕ ಕೇಂದ್ರಕ್ಕೆ ಎಎಓ ಹುದ್ದೆಗಳು, ಕಂಪ್ಯೂಟರ್ ಆಪರೇಟರ್ ಹುದ್ದೆ, ಹೋಗ್ಲಿ ಅತ್ಲಾಗ್ ಕದಾ ತಗದು ಕಸಾ ಗೂಡಸಾಕ್ ಒಬ್ಬ ಸಿಬ್ಬಂದಿ ಕೋಡ್ರಿ, ಅನ್ನದಾತನಿಗೆ ಸರಿಯಾದ ಸೌಲಭ್ಯ ನೀಡ್ರಿ.
Kshetra Samachara
21/01/2022 05:09 pm