ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನೀರು ವ್ಯರ್ಥ ಮಾಡುವುದು ಶಿಕ್ಷಾರ್ಹ ಅಪರಾಧ: ಹು-ಧಾ ಮಹಾನಗರದಲ್ಲಿ ದಾಖಲಾಗದ ಪ್ರಕರಣ

ಹುಬ್ಬಳ್ಳಿ: ಕುಡಿಯುವ ನೀರನ್ನು ವ್ಯರ್ಥ ಮಾಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಕೇಂದ್ರ ಸರ್ಕಾರ ಸೂಚಿಸಿದಂತೆ ಮಹಾನಗರ ಪಾಲಿಕೆ ಮತ್ತು ನಾಗರಿಕ ಸಂಸ್ಥೆಗಳು ನೀರು ವ್ಯರ್ಥವಾಗುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.ಆದರೇ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹು-ಧಾ ಮಹಾನಗರದಲ್ಲಿ ನೀರಿನ ವ್ಯರ್ಥವಾಗುವ ಯಾವುದೇ ಪ್ರಕರಣಗಳು ಕೂಡ ಬೆಳಕಿಗೆ ಬಂದಿಲ್ಲ..

ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾನಗರದಲ್ಲಿ ಈಗಾಗಲೇ 24 ವಾರ್ಡ್ ಗಳಲ್ಲಿ 24×7 ನೀರಿನ ಸರಬರಾಜು ನೀಡಲಾಗುತ್ತಿದ್ದು,ಇಲ್ಲಿ ಜನರು ಶುಲ್ಕ ಪಾವತಿ ಹೊರೆಯಿಂದಾಗಿ ಯಾವುದೇ ನೀರನ್ನು ವ್ಯರ್ಥವಾಗಿ ಬಳಸುತ್ತಿಲ್ಲ.ಅಲ್ಲದೇ ಕೆಲವೊಂದು ಸಾರ್ವಜನಿಕ ನೀರಿನ ಘಟಕಗಳು ಹಾಗೂ ನೀರಿನ ಪೈಪಲೈನ್ ಒಡೆದು ವ್ಯರ್ಥವಾಗುತ್ತಿದ್ದರೆ ಎಲ್ ಎನ್ ಟಿ ಕಂಪನಿಯು ಮಹಾನಗರ ಪಾಲಿಕೆ ನಿರ್ದೇಶನದ ಮೇರೆಗೆ ಕೂಡಲೇ ಸರಿಪಡಿಸುತ್ತಿದ್ದು,ಯಾವುದೇ ನೀರಿನ ವ್ಯರ್ಥ ಪ್ರಕರಣಗಳು ಕೂಡ ಇಲ್ಲದಾಗಿದೆ.

ಪರಿಸರ ಸಂರಕ್ಷಣಾ ಕಾಯ್ದೆ -1986 ರ ಸೆಕ್ಷನ್ 5 ರ ಅಡಿಯಲ್ಲಿ ಹೊರಡಿಸಲಾದ ಕೇಂದ್ರ ಸರ್ಕಾರದ ವೈಡ್ ಅಧಿಸೂಚನೆಯು ಕುಡಿಯುವ ನೀರನ್ನು ವ್ಯರ್ಥ ಮಾಡುವುದನ್ನು ಶಿಕ್ಷಾರ್ಹ ಅಪರಾಧವಾಗಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದೆ.ಅಧಿಸೂಚನೆಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀರು ಸರಬರಾಜನ್ನು ನಿರ್ವಹಿಸುವ ನಾಗರಿಕ ಸಂಸ್ಥೆಗಳು ಯಾವುದೇ ತ್ಯಾಜ್ಯ ಅಥವಾ ಕುಡಿಯುವ ನೀರಿನ ದುರುಪಯೋಗವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕರ್ತವ್ಯನಿರತವಾಗಿದೆ.ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕೂಡ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದು,ನೀರಿನ ಪೋಲ್ ಆಗುವಂತಹ ಪ್ರಸಂಗಗಳು ಬಂದಿಲ್ಲ ಎಂದು ಸ್ಪಷ್ಟ ಪಡಿಸಿವೆ.

ಜನರು ಸ್ವಯಂ ಪ್ರೇರಿತರಾಗಿ ನೀರನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ. ಅಲ್ಲದೇ ಈಗಾಗಲೇ ನವೀಲು ತೀರ್ಥದಿಂದ 200 ಎಂ.ಎಲ್.ಡಿ ನೀರನ್ನು ತೆಗೆದುಕೊಂಡು ಬರಲಾಗುತ್ತಿದ್ದು,ಎಲ್ಲ ರೀತಿಯ ಸ್ಟೋರೇಜ್, ಓವರ್ ಹೆಡ್ ಟ್ಯಾಂಕರ್ ಮೂಲಕ ನೀರಿನ ಯಾವುದೇ ಸಮಸ್ಯೆಯಾಗದಂತೆ ಮಹಾನಗರ ಪಾಲಿಕೆ ಸೂಕ್ತ ನಿರ್ಧಾರಕ್ಕೆ ಮುಂದಾಗಿದ್ದು,ಜನನಿಬಿಡ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಮುಂದಾಗುತ್ತಿದ್ದು,ನೀರಿನ ವ್ಯರ್ಥ ಬಳಕೆಗೆ ಮಹಾನಗರ ಪಾಲಿಕೆ ಕಡಿವಾಣ ಹಾಕಲಿದೆ.

Edited By : Manjunath H D
Kshetra Samachara

Kshetra Samachara

02/11/2020 09:17 pm

Cinque Terre

45.4 K

Cinque Terre

8

ಸಂಬಂಧಿತ ಸುದ್ದಿ