ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಂತಿಗೆ ಹಣ ಸಂಗ್ರಹಿಸಿ ತಮ್ಮ ಹೊಲದ ರಸ್ತೆ ತಾವೇ ದುರಸ್ತಿ ಮಾಡಿದ ರೈತರು

ಕುಂದಗೋಳ : ಈ ಹಳ್ಳಿಗಳಿಂದ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿ ಹೋಗಿದ್ದು ನಿಮ್ಗೆ ಗೊತ್ತಿರುವ ವಿಚಾರ ಈ ಹಾಳಾದ ರಸ್ತೆಗಳಿಗೆ ಗ್ರಾಮಸ್ಥರೇ ದುರಸ್ತಿ ಭಾಗ್ಯ ಕಲ್ಪಿಸಿದ್ದು ಜನಪ್ರತಿನಿಧಿಗಳು ನಮ್ಮ ಪಾಲಿಗಿಲ್ಲ ಎಂಬ ಸಂದೇಶ ನೀಡಿದ್ದಾರೆ.

ಹೌದು ! ಇದೋ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ರೈತರೇ ಇಂತಹ ಸತ್ಕಾರ್ಯಕ್ಕೆ ಕೈ ಹಾಕಿದ್ದು ತಮ್ಮ ಹೊಲಕ್ಕೆ ಹೋಗುವ ಹಾಲಕೇರಿ 6 ಕಿ.ಮೀ ರಸ್ತೆಯನ್ನ ತಾವೇ ವಂತಿಗೆ ಹಣ ಸಂಗ್ರಹಿಸಿ ತಮ್ಮ ತಮ್ಮ ಸ್ವಂತ ಟ್ರ್ಯಾಕ್ಟರ್ ಬಳಸಿ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.

ಈ ಹಾಲಕೇರಿ ರಸ್ತೆಗೆ ಹೊಂದಿಕೊಂಡಿರುವ ಹೊಲಗಳ ರೈತರು ಎಲ್ಲರೂ ವಂತಿಗೆ ಸಂಗ್ರಹಿಸಿ 10.000 ಕೂಡಿಸಿ ರಸ್ತೆ ಕಾರ್ಯ ಆರಂಭಿಸಿದ್ದು ಹಣ ಕಡಿಮೆಯಾದಲ್ಲಿ ಮತ್ತೆ ವಂತಿಗೆ ಹಾಕಲಿದ್ದಾರೆ. ಈ ಹಿಂದೆ ಹಾಲಕೇರಿ ರಸ್ತೆ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು, ಪಂಚಾಯಿತಿ ಯಿಂದ ಸೌಲಭ್ಯ ಸಿಗದೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೂ ಮುಂದಾದರೂ ಈ ಬಗ್ಗೆ ಕ್ರಮ ಸರ್ಕಾರದ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಕಣ್ಣು ತೆರೆಯಿರಿ.

Edited By : Nagesh Gaonkar
Kshetra Samachara

Kshetra Samachara

31/10/2020 12:14 pm

Cinque Terre

25.35 K

Cinque Terre

0

ಸಂಬಂಧಿತ ಸುದ್ದಿ