ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳದಲ್ಲಿ ಮುಗಿಯದ ಸಂತೆ ಕ್ಯಾತೆ ಚುನಾವಣೆ ದಿನವು ಸಂತೆ ಚಾಲೂ

ಕುಂದಗೋಳ : ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ಪಟ್ಟಣದಲ್ಲಿ ಬುಧವಾರದ ಸಂತೆ ಆರಂಭಿಸದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ರೂ ಇಂದು ಮತ್ತೇ ಪೊಲೀಸರ ಜೊತೆ ವಾದಕ್ಕೀಳಿದ ವ್ಯಾಪಾರಸ್ಥರು ಹಾಗೂ ರೈತರು ಪೊಲೀಸ್ ಮೇಲಾಧಿಕಾರಿಗಳಿಗೆ ಕರೆ ಮಾಡಿ ಸಂತೇಯನ್ನ ಎಂದಿನಂತೆ ಆರಂಭಿಸಿ ಬಿಟ್ಟರು.

ಹೌದು ! ಪಶ್ಚಿಮ ಪದವೀಧರ ಮತದಾನ ಅನ್ವಯ ಮಧ್ಯಾಹ್ನದವರೆಗೂ ಸಂತೇ ಹೆಚ್ಚದೆ ತಂದಿಟ್ಟಿದ್ದ ತರಕಾರಿಗಳನ್ನ ಕಾಯ್ದು ಸುಸ್ತಾದ ಜನ ಸಾಯಂಕಾಲ ಯಾರ ಮಾತಿಗೆ ತಲೆಯಾಡಿಸಿದೆ ಸಂತೇ ಆರಂಭಿಸಿದರು ಈ ನಡುವೆ ಪೊಲೀಸರು ಸಂತೇ ಬೇಡಾ ಎಂದರು ವ್ಯಾಪಾರಸ್ಥರು ಸ್ವಾಮಿ ಶನಿವಾರ ಸೀಗೆ ಹುಣ್ಣಿಮೆ ಐತಿ ಇದ ರೈತರ ದೊಡ್ಡ ಹಬ್ಬ ಜನರಿಗೆ ಸಂತೆ ಬೇಕು ಎಂದಾಗ ಪಟ್ಟಣದ ಜನ ಸಹ ಧ್ವನಿಗೂಡಿಸಿ ಸಾಮಾನ್ಯವಾಗಿ ಸಂತೆ ನಡೆಸೆ ಬಿಟ್ಟರು.

ಆದ್ರೇ ಈ ಮೊದಲಿನಂತೆಯೆ ಕುಂದಗೋಳ ಪಟ್ಟಣದ ಪಂಚಾಯಿತಿಗೆ ಇಂದಿಗೂ ಸಹ ಸಾರ್ವಜನಿಕವಾಗಿ ಸಂತೆ ಆರಂಭಿಸಲು ಅನುಮತಿ ಸಿಗದಿರುವುದು ವ್ಯಾಪಾರಸ್ಥ ಮತ್ತು ರೈತರನ್ನು ಚಿಂತಿಗೀಡು ಮಾಡಿದೆ.

Edited By : Nagesh Gaonkar
Kshetra Samachara

Kshetra Samachara

28/10/2020 08:08 pm

Cinque Terre

52.11 K

Cinque Terre

1

ಸಂಬಂಧಿತ ಸುದ್ದಿ