ಕುಂದಗೋಳ : ಊರಲ್ಲೇ ಇಲ್ಲದ ಊರಿನವರಿಗೆ ಗೊತ್ತೆ ಇರದ ವ್ಯಕ್ತಿಯೊಬ್ಬ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿದ ನರೇಗಾ ಹಾಗೂ ಕೃಷಿ ಯೋಜನೆಯ ಅವ್ಯವಹಾರದ ಅರ್ಜಿಯ ತನಿಖೆಗಾಗಿ ಬಿಳೇಬಾಳ ಗ್ರಾಮಕ್ಕೆ ಆಗಮಿಸಿದ ಅಧಿಕಾರಗಳನ್ನ ಗ್ರಾಮಸ್ಥರು ಮರಳಿ ಕಳುಹಿಸಿದ ಘಟನೆ ಬಿಳೇಬಾಳ ಗ್ರಾಮದಲ್ಲಿ ನಡೆದಿದೆ.
ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೇಬಾಳ ಗ್ರಾಮದಲ್ಲಿ ನರೇಗಾ ಹಾಗೂ ಕೃಷಿ ಯೋಜನೆಯಡಿ ಅವ್ಯವಹಾರ ನಡೆದಿದೆ ತನಿಖೆ ಮಾಡಿ ಎಂದು ಮೃತ್ಯುಂಜಯ ಎಸ್ ಪಾಟೀಲ ಎಂಬ ವ್ಯಕ್ತಿ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ ಈ ಕುರಿತು ಗ್ರಾಮದ ಪಿಡಿಓ ಸಮ್ಮುಖದಲ್ಲಿ ದಾಖಲಾತಿ ಪರಿಶೀಲನೆ ಮಾಡುತ್ತಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರು ಕೈ ಮುಗಿದು ಸ್ವಾಮಿ ಅರ್ಜಿ ಹಾಕಿದ ಪುಣ್ಯಾತ್ಮನನ್ನ ಕರಕೊಂಡು ಬರ್ರೀ "ಯಾ ಊರಾಗ ಯಾರ ರೊಕ್ಕಾ ತಿಂದಲ್ರೀ ಎಲ್ಲಾರು ತಿಂತಾರು ಈ ಊರಾಗೂ ತಿಂದಾರ ವಾಸದ ಮನೆ, ಚರಂಡಿ, ನೀರು, ರಸ್ತೆ, ನಿರ್ಮಾಣ ಅಷ್ಟೇ ಯಾಕ್ರೀ ಶೌಚಾಲಯ, ನರೇಗಾ ಯೋಜನೆ ಒಳ್ಗೂ ರೊಕ್ಕಾ ತಿಂದಾರ್ ಆದ್ರ ಆ ತನಿಖೆ ಅರ್ಜಿದಾರನ ಇದ್ದಾಗ ಆಗ್ಲೀ ಎಂದಿದ್ದಾರೆ.
ತನಿಖಾ ಸಂದರ್ಭದಲ್ಲಿ ಆಗಮಿಸಿದ ವೃದ್ಧ ರೈತನೊಬ್ಬ ವಾಸದ ಮನೆ ಕೊಡ್ತವಿ ಅಂತ್ಹೇಳಿ ಅತಿವೃಷ್ಟಿಗೆ ಹಾಳಾದ ಪೂರ್ತಿ ಮನಿ ಕೆಡವಿದ್ರೂ ರೊಕ್ಕಾ ಕೊಟ್ಟಿಲ್ಲಾ ಹೊಲ ಲಾವಣಿ ಹಾಕೇನಿ ದಯವಿಟ್ಟು ರೊಕ್ಕಾ ಕೊಡಸ್ರೀ ಎಂದು ಕೈ ಜೋಡಿಸಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಬಳಿಕ ವೃದ್ಧನ ಧ್ವನಿಗೆ ಸಮ್ಮತಿಸಿದ ಗ್ರಾಮಸ್ಥರು ನೋಡ್ರಿ ಊರಾಗ ಸಾವಿರ ಸಮಸ್ಯೆ ಅದಾವು ಅವನ್ನು ಬಗೆಹರಸ್ರೀ ಪಂಚಾಯಿತಿ ಅಧ್ಯಕ್ಷ ಸದಸ್ಯರ ಬರ್ತಾರ ತಿಂತಾರೆ ಹೊಗ್ತಾರ ಆದ್ರೆ ಪಿಡಿಓ ಎನ್ಮಾಡಬೇಕು ಅವರಿಗೆ ಕೆಲ್ಸಾ ಮಾಡಾಕ ಬಿಡ್ರೀ ಊರು ಅಭಿವೃದ್ಧಿ ಬಗ್ಗೆ ತನಿಖೆ ಮಾಡ್ರೀ ಆಗಿ ಹೋದದ್ದ ತಿಂದ್ ಹೋದದ್ದ ತನಿಖೆ ಮಾಡಾಕ ಅರ್ಜಿ ಕೊಟ್ಟಾವನ ಕರ್ಕೋಂಡು ಬರ್ರೀ ಎಂದು ಮನವಿ ಪತ್ರ ಬರೆದು ಕೊಟ್ಟರು.
Kshetra Samachara
17/10/2020 10:46 pm