ಧಾರವಾಡ: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ಮಹಿಳೆಯ ಮನೆಯವರು ಆಕೆಯ ಅಂಗಾಂಗ ದಾನ ಮಾಡಿ ಮಾದರಿ ಎನಿಸಿದ್ದಾರೆ. ಅಲ್ಲದೇ ಆ ಮಹಿಳೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.
ಧಾರವಾಡ ಮೂಲದ ಮಹಿಳೆಯೊಬ್ಬರಿಗೆ ಇತ್ತೀಚೆಗೆ ಅಪಘಾತವಾಗಿತ್ತು. ಅವರಿಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ನೀಡಲಾಗುತ್ತಿತ್ತು. ಆದರೆ, ಅವರ ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ ಹೃದಯ ಕವಾಟ ಸೇರಿದಂತೆ ಇತರ ಅಂಗಾಂಗಗಳನ್ನು ಅವರ ಮನೆಯವರು ದಾನ ಮಾಡಿದ್ದಾರೆ.
ಕರ್ನಾಟಕ ಕಸಿ ಪ್ರಾಧಿಕಾರದ ನಿಯಮದಂತೆ ಒಂದು ಕಿಡ್ನಿಯನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಸಿ ಮಾಡಲಾಯಿತು.
ಮತ್ತೊಂದು ಕಿಡ್ನಿಯನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ರವಾನಿಸಲಾಯಿತು. ಲಿವರ್‌ನ್ನು (ಯಕೃತ್) ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ನೀಡಲಾಯಿತು ಮತ್ತು ಹೃದಯ ಕವಾಟವನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ನೀಡಲಾಯಿತು. ಬೆಳಗಾವಿಗೆ ಒಂದು ಕಿಡ್ನಿಯನ್ನು ಝೀರೋ ಟ್ರಾಫಿಕ್ ಮೂಲಕ ಕೊಂಡೊಯ್ಯಲಾಯಿತು.
ಮೊನ್ನೆಯಷ್ಟೇ ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕಿಯ ಅಂಗಾಂಗಗಳನ್ನು ಆಕೆಯ ಮನೆಯವರು ದಾನ ಮಾಡಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು.
Kshetra Samachara
14/07/2022 09:28 pm