ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಕೈಕ ಪುತ್ರ ಕೊರೊನಾಗೆ ಬಲಿ; ಅನಾಥ ದಂಪತಿ ನೆರವಿಗೆ ಮೊರೆ

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಬಡತನ, ಸಂಕಷ್ಟವಿದ್ದರೂ ಆ ಕುಟುಂಬ ಅದು ಹೇಗೋ ಜೀವನ ನಡೆಸುತ್ತಿತು. ಆದರೆ, ದುರ್ವಿಧಿ ಆ ದಿನ ಬಲವಾದ ಪ್ರಹಾರ ನೀಡಿಯೇ ಬಿಟ್ಟಿತು! ಹೌದು... ಕೊರೊನಾ ಮಹಾಮಾರಿಯ ಕ್ರೌರ್ಯಕ್ಕೆ ಸಿಲುಕಿ ಮನೆಗೆ ಆಧಾರಸ್ತಂಭವಾಗಿದ್ದ ಇದ್ದ ಒಬ್ಬ ಮಗನನ್ನು ಕಳೆದುಕೊಂಡು, ವೃದ್ಧ ದಂಪತಿ ಬೀದಿಗೆ ಬಂದಿದ್ದಾರೆ.

ತಂದೆಗೆ ಪಾರ್ಶ್ವವಾಯು, ತಾಯಿಗೆ ಒಂದು ಕಣ್ಣಿಲ್ಲ. ಈಗ ಕುಟುಂಬ ದಿನವಿಡೀ ಕಣ್ಣೀರು ಹಾಕುವ ಪ್ರಸಂಗ ಬಂದೊದಗಿದೆ.

ಇವರ ಹೆಸರು ಬಾಷಾ ಸಾಬ್ ಅತ್ತಾರ. ಬೈರಿದೇವರಕೊಪ್ಪ ಗಾಮನಗಟ್ಟಿ ರಸ್ತೆ ಮಡ್ಡಿಹಾಳದ ನಿವಾಸಿ. ಕಳೆದ ವರ್ಷ ಜವಾಬ್ದಾರಿ ಹೊತ್ತು ಮನೆ ನಿರ್ವಹಣೆ ಮಾಡುತ್ತಿದ್ದ ಮಗ ಖಾದರ್‌ ಬಾಷಾ, ಕೊರೊನಾದಿಂದಾಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ದಂಪತಿ ಈಗ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.

ಬಾಷಾ ಸಾಬ್ ಗೆ ಪಾರ್ಶ್ವವಾಯು ಅಟ್ಯಾಕ್ ಆಗಿದ್ದು, ಪತ್ನಿ ಖಾದರಬಿ ಅವರಿಗೆ ಒಂದು ಕಣ್ಣು ಕಾಣಿಸುತ್ತಿಲ್ಲ. ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಪ್ರತಿ ತಿಂಗಳು ಆಸ್ಪತ್ರೆ ವೆಚ್ಚಕ್ಕಾಗಿಯೇ ಏಳು ಸಾವಿರಕ್ಕೂ ಅಧಿಕ ಹಣದ ಅಗತ್ಯವಿದೆ. ಸದ್ಯ ಕುಟುಂಬ ನಿರ್ವಹಣೆ ಮಾಡಲು ಆಗದ ಕಾರಣ, ಈ ಬಡದಂಪತಿ ಹಣ ಹಾಗೂ ಇನ್ನಿತರ ನೆರವು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಸಹಾಯ ಮಾಡುವವರು:

Name:- Nafisabi khadrabasha Attar

Bank name- UNION BANK OF INDIA

Branch- shirur park vidyanagara hubli

Ac/ no- 520291000391978

IFSC code- UBIN0905283

Mob no- 9611774956

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/07/2022 05:44 pm

Cinque Terre

202.57 K

Cinque Terre

10

ಸಂಬಂಧಿತ ಸುದ್ದಿ