ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಣ್ಣಿಲ್ಲದಿದ್ದರೇನಂತೆ? ಸುಮಧುರ ಕಂಠವಿದೆಯಲ್ಲ!

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಪ್ರತಿಯೊಬ್ಬರಿಗೂ ಒಂದಿಲ್ಲೊಂದು ವೈಫಲ್ಯ ಇದ್ದೇ ಇರುತ್ತದೆ. ಆ ವೈಫಲ್ಯ ಮೆಟ್ಟಿ ನಿಂತವರು ಸುಂದರ ಬದುಕು ಕಟ್ಟಿಕೊಳ್ಳುತ್ತಾರೆ. ಹೀಗೆ ದೃಶ್ಯಗಳಲ್ಲಿ ತಮ್ಮ ಸುಮಧರ ಕಂಠದಿಂದ ಗಾನಸಿರಿ ಹರಡುತ್ತಿರುವ ಇವರು ಅಂಧರು. ಆದರೆ, ಇವರ ಈ ಹಾಡಿಗೆ ಅಂಧತ್ವ ಎಂದೂ ಅಡ್ಡಿಯಾಗಿಲ್ಲ.

ಇವರು ಕಲಬುರ್ಗಿಯ 'ಶರಣ ಬಸವ' ಅಂಧರ ಗೀತ ಗಾಯನ ಕಲಾ ಸಂಘದವರು. ನೋಡಲು ಕುಬ್ಜಳಾಗಿರುವ ಈ ಕಲಾವಿದೆಗೆ ದೃಷ್ಟಿದೋಷವಿದೆ. ಈಕೆಗೆ ಮಾತ್ರವಲ್ಲ, ಸಹ ಕಲಾವಿದರಿಗೂ ಬಣ್ಣದ ಜಗತ್ತನ್ನು ನೋಡುವ ಸೌಭಾಗ್ಯವಿಲ್ಲ.

ಅದೇನೇ ಇರಲಿ. ಹೀಗೆ ಊರೂರು ಸುತ್ತಿ ಆರ್ಕೆಸ್ಟ್ರಾ ಮೂಲಕ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿ, ಅವರು ಕೊಟ್ಟಷ್ಟು ದೇಣಿಗೆ ಪಡೆದು ತಮ್ಮ ಜೀವನ ಸಾಗಿಸುವುದರ ತಮ್ಮೊಟ್ಟಿಗಿರುವ ಅಂಧ ಕಲಾವಿದರ ಬಾಳಿಗೂ ಬೆಳಕಾಗಿದ್ದಾರೆ.

ಯಾವ ಅಂಧತ್ವ, ವೈಫಲ್ಯ ಜೀವನ ಸಾಗಿಸೋದಕ್ಕೆ ಅಡ್ಡಿಯಾಗೋದಿಲ್ಲ ಎಂಬುದನ್ನು ಇವರಿಂದ ನೋಡಿ ಕಲಿಯಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ನನ್ನಿಂದ ಏನೂ ಮಾಡಲು ಆಗೋದಿಲ್ಲ. ಜೀವನದಲ್ಲಿ ಎಲ್ಲವೂ ಮುಗಿದೇ ಹೋಯ್ತು ಎನ್ನುವವರು ಇವರನ್ನು ಸ್ಫೂರ್ತಿಯಾಗಿ ಪಡೆದುಕೊಳ್ಳಬಹುದಲ್ಲವೇ?

Edited By :
Kshetra Samachara

Kshetra Samachara

17/06/2022 11:26 am

Cinque Terre

32.09 K

Cinque Terre

2

ಸಂಬಂಧಿತ ಸುದ್ದಿ