ಹುಬ್ಬಳ್ಳಿ: ಆತ ಹುಬ್ಬಳ್ಳಿಯ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಫೋಟೊ ಜರ್ನಲಿಸ್ಟ್. ಅದ್ಭುತ ಫೋಟೊ ಸೆರೆಹಿಡಿಯುವ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ತಮ್ಮಲ್ಲಿರುವ ಮತ್ತೊಂದು ಪ್ರತಿಭೆಯನ್ನು ಅನಾವರಣಗಿಳಿಸಿದ್ದು, ಜಾನಪದ ಸೊಗಡನ್ನು ಯುವ ಪೀಳಿಗೆಗೆ ಪರಿಚಯಿಸಲು ಮುಂದಾಗಿದ್ದಾರೆ. ಹಾಗಿದ್ದರೆ ಯಾರು ಆ ಕಲಾವಿದ ಅಂತೀರಾ? ಈ ಸ್ಟೋರಿ ನೋಡೋಣ...
ಹೀಗೆ ಕೈಯಲ್ಲಿ ಕುಂಚ ಹಿಡಿದು ಯಾವುದೇ ಸ್ಕೆಚ್ ಇಲ್ಲದೇ ಚಿತ್ರ ಬಿಡಿಸುತ್ತಿರುವ ಇವರು ರವೀಂದ್ರ ಹಳಿಜೋಳ. ಕನ್ನಡ ಪತ್ರಿಕೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಕಲೆಯೊಂದನ್ನು ಯುವ ಪೀಳಿಗೆಗೆ ಪರಿಚಯಿಸುತ್ತಾ ತಮ್ಮ ವೃತ್ತಿ ಬದುಕಿನ ಮತ್ತೊಂದು ಆಯಾಮ ಆರಂಭಿಸಿದ್ದಾರೆ.
ಮಹಾರಾಷ್ಟ್ರದ ಟ್ರೈಬಲ್ ಆರ್ಟ್ ಚಿತ್ರಗಳನ್ನು ರವೀಂದ್ರ ಅದ್ಭುತವಾಗಿ ಚಿತ್ರಿಸಿ ಕಲಾಪ್ರೇಮಿಗಳ ಮನಸ್ಸನ್ನು ಗೆದ್ದಿದ್ದಾರೆ. ಒಂದು ಚಿತ್ರ ನೂರು ಅರ್ಥ ಹೇಳುವಂತಹ ಅದೆಷ್ಟೋ ಪೋಟೊಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಮಾತ್ರವಲ್ಲದೆ, ವಿಶೇಷತೆಯ ಚಿತ್ರಕಲೆ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ಆಸಕ್ತರಿಗೆ ತರಬೇತಿ ನೀಡಲೂ ಇವರು ಮುಂದಾಗಿರುವುದು ಪ್ರಶಂಸನೀಯ.
- ಮಲ್ಲೇಶ ಸೂರಣಗಿ ʼಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿʼ
Kshetra Samachara
22/05/2022 11:59 am