ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೇವಲ 600 ಗ್ರಾಂ ತೂಕದ ನವಜಾತ ಶಿಶು ಜನನ !

ಧಾರವಾಡ: ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಜನನವಾಗಿದ್ದು, ಆ ಮಗು ಕೇವಲ 600 ಗ್ರಾಂ ತೂಕ ಹೊಂದಿದೆ. ಸಹಜವಾಗಿ ಇಷ್ಟು ಕಡಿಮೆ ತೂಕದ ಮಗು ಬದುಕುಳಿಯುವುದು ಕಷ್ಟ. ಆದರೆ, ಈ ಮಗು ಆರೋಗ್ಯವಾಗಿದೆ.

ಧಾರವಾಡ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯರು ಈ ಮಗುವನ್ನು ಐಸಿಯುನಲ್ಲಿಟ್ಟು ಆರೈಕೆ ಮಾಡುತ್ತಿದ್ದಾರೆ. ಆರೋಗ್ಯವಂತ ಮಗು ಜನನವಾದರೆ ಸಾಮಾನ್ಯವಾಗಿ ಅದರ ತೂಕ 2.5 ಕೆಜಿ ಇರುತ್ತದೆ. ಆದರೆ, ಈ ಮಗುವಿನ ತೂಕ 600 ಗ್ರಾಂ ಇದ್ದರೂ ಜಿಲ್ಲಾಸ್ಪತ್ರೆ ವೈದ್ಯರು ಆ ಮಗುವನ್ನು ಬದುಕುಳಿಸಿ ಅದರ ಆರೈಕೆ ಮಾಡುತ್ತಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2022 04:35 pm

Cinque Terre

37.5 K

Cinque Terre

1

ಸಂಬಂಧಿತ ಸುದ್ದಿ