ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು: 14 ಇಂಚಿನಲ್ಲಿ ಹುಟ್ಟಿತು ಹಂಪಿ ರಥ

ಧಾರವಾಡ: ಆತನದ್ದು ಇನ್ನೂ ಚಿಕ್ಕ ವಯಸ್ಸು.. ಆಟವಾಯ್ತು, ಪಾಠವಾಯ್ತು ಅನ್ನೋ ವಯಸ್ಸು. ಆದರೆ, ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ.

ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ಈ ಬಾಲಕನ ಹೆಸರು ವಿನಾಯಕ ಹಿರೇಮಠ. ಧಾರವಾಡದ ಸರ್ಕಾರಿ ಚಿತ್ರಕಲಾ ಕಾಲೇಜಿನ ಬಿವಿಎ ಬ್ಯಾಚುಲರ್ ಆಫ್ ವಿಶುವಲ್ ಆರ್ಟ್‌ನ ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾನೆ.

ಹಂಪಿಗೆ ಹೋದಾಗ ಅಲ್ಲಿನ ಕಲ್ಲಿನ ರಥ ನೋಡಿ ತಾನೂ ಅದೇ ರೀತಿ ಕಲ್ಲಿನ ರಥವನ್ನು ಮಣ್ಣಿನಲ್ಲಿ ಸಿದ್ಧಪಡಿಸಬೇಕು ಎಂದುಕೊಂಡಿದ್ದ. ಈಗ ಆ ಕಾರ್ಯವನ್ನು ವಿನಾಯಕ ಸಾಧಿಸಿದ್ದಾನೆ.

ಕೇವಲ 14 ಇಂಚಿನಲ್ಲಿ ವಿನಾಯಕ ಇದೀಗ ಥೇಟ್ ಹಂಪಿಯ ರಥವನ್ನು ಹೋಲುವ ಮಾದರಿಯಲ್ಲೇ ಮಣ್ಣಿನ ರಥವನ್ನು ಸಿದ್ಧಪಡಿಸಿ ಗಮನಸೆಳೆದಿದ್ದಾನೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/04/2022 09:54 am

Cinque Terre

56.25 K

Cinque Terre

3

ಸಂಬಂಧಿತ ಸುದ್ದಿ