ಹುಬ್ಬಳ್ಳಿ: ಆತ ಒಬ್ಬ ಮಹಾನ್ ವ್ಯಕ್ತಿಯನ್ನು ರೋಲ್ ಮಾಡೆಲ್ ಆಗಿ ಇಟ್ಟುಕೊಂಡ ಅಭಿಮಾನಿ. ತನ್ನ ಹುಟ್ಟು ಹಬ್ಬಕ್ಕೆ ತನ್ನ ಅಭಿಮಾನವನ್ನು ವಿನೂತನವಾಗಿ ವ್ಯಕ್ತಪಡಿಸಿದ್ದಾನೆ. ಆತನ ಕಾರ್ಯ ನಿಜಕ್ಕೂ ಹುಬ್ಬಳ್ಳಿಯ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುವುದು ಖಂಡಿತ. ಹಾಗಿದ್ದರೇ ಯಾರು ಆ ಅಭಿಮಾನಿ ಆತನ ಅಭಿಮಾನ ಎಂತಹದ್ದು ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ತನ್ನ ರಕ್ತದಲ್ಲಿ ಪತ್ರ ಬರೆಯುತ್ತಿರುವ ಈ ವ್ಯಕ್ತಿ ವಾಣಿಜ್ಯನಗರಿ ಹುಬ್ಬಳ್ಳಿಯವರು. ಭಗತಸಿಂಗ್ ಯುವಕ ಮಂಡಳದ ಅಧ್ಯಕ್ಷರಾದ ಶ್ರೀಧರ ಸಾಂಗ್ಲಿಕರ್ ಎಂಬುವವರೇ ತಮ್ಮ ಜನ್ಮದಿನದ ಪ್ರಯುಕ್ತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಹೌದು. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಹೊಸೂರಿನ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರದಲ್ಲಿ ದೊಡ್ಡ ಪ್ರಮಾಣ ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಬೇಕು ಎಂಬುವಂತ ಮಹದಾಸೆಯಿಂದ ಇಂತಹದೊಂದು ಅಭೂತಪೂರ್ವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಅಭಿಮಾನಿ ಕ್ರಾಂತಿವೀರ ಭಗತಸಿಂಗ್ ಅವರ ಮೇಲಿನ ಅಪಾರ ಅಭಿಮಾನದಿಂದ ಹಾಗೂ ಮುಂಬರುವ ಪೀಳಿಗೆಗೆ ಭಗತಸಿಂಗ್ ಅವರ ಪರಿಚಯಿಸುವ ಸದುದ್ದೇಶದಿಂದ ಇಂತಹದೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಗಾಳಿ ದುರ್ಗಮ್ಮ ದೇವಿಯ ದೇವಸ್ಥಾನದ ಹತ್ತಿರ ನಿಗದಿಪಡಿಸಿದಂತೆ ಬೃಹತ್ ಗಾತ್ರದ ಭಗತಸಿಂಗ್ ಪುತ್ಥಳಿ ನಿರ್ಮಾಣ ಮಾಡುವಂತೆ ನೆತ್ತರದಲ್ಲಿ ಪತ್ರ ಬರೆದು ಗಮನ ಸೆಳೆದಿದ್ದಾನೆ.
ಒಟ್ಟಿನಲ್ಲಿ ಇಂತಹದೊಂದು ಕಾರ್ಯಕ್ಕೆ ಮುಂದಾಗುವ ಮೂಲಕ ಸ್ವಾತಂತ್ರ್ಯ ಯೋಧ ಭಗತಸಿಂಗ್ ಗೆ ಗೌರವ ಸಲ್ಲಿಸಿದ್ದು, ಜನ್ಮದಿನವನ್ನು ವಿನೂತನವಾಗಿ ಆಚರಣೆ ಮಾಡಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
03/04/2022 04:27 pm