ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಚಳಿಗಾಲದಲ್ಲೂ ಮಾರಾಟವಾಗದ ಕಂಬಳಿ ! ಶುಭ ಕಾರ್ಯಕ್ಕಷ್ಟೇ ಸಿಮೀತ

ವಿಶೇಷ ವರದಿ : ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

ಕುಂದಗೋಳ : ಮದುವೆ ದಿಬ್ಬಣ, ಮನೆ ಪೂಜೆ, ಜವಳ ಕಾರ್ಯ, ದೇವರ ಪೂಜೆ ಹೀಗೆ ಸಾಲು ಸಾಲು ಶುಭ ಮುಹೂರ್ತ ಶುಭ ಕಾರ್ಯಗಳಿಗೆ ಅಗತ್ಯವಾದ ಕಂಬಳಿ ಇದೀಗ ಮಾರಾಟ ಕಾಣದೆ ಬೆಲೆ ಕಳೆದುಕೊಂಡು ನೂಲುವವರ ಬದುಕನ್ನು ನೂಲುತ್ತಾ ಮಾರುವವರ ಬದುಕನ್ನು ಕಷ್ಟಕ್ಕೆ ತಳ್ಳಿದೆ.

ಪ್ರಾಚೀನ ಕಾಲದಿಂದಲೂ ಕಂಬಳಿಗೆ ವಿಶೇಷ ಪ್ರಾಶಸ್ತ್ಯವಿದೆ‌, ಯಾವುದೇ ಶುಭ ಕಾರ್ಯದಲ್ಲಿ ಕಂಬಳಿ ಇಲ್ಲದೆ ಹೋದ್ರೆ ನಡೆಯೊದಿಲ್ಲಾ, ಆದ್ರೇ ಅದೇ ಕಂಬಳಿ ಬಳಸಲು ಜನರು ಹಿಂದೇಟು ಹಾಕುತ್ತಿದ್ದು, ಈ ಚಳಿಗಾಲದಲ್ಲಿ ಕಂಬಳಿ ಮಾರಲು ಬಂದ ವ್ಯಾಪಾರಿಗಳು ವ್ಯವಹಾರವಿಲ್ಲದೆ ಖಾಲಿ ಕೂರುವ ಪ್ರಸಂಗ ಎರ್ಪಟ್ಟಿದೆ.

ದೂರದ ರಾಣೆಬೆನ್ನೂರಿನಿಂದ ಕಂಬಳಿ ನೂಲಿಕೊಂಡು ಕುಂದಗೋಳ ಪಟ್ಟಣ ತಲುಪಿ ಕಂಬಳಿ ಮಾರಾಟ ಮಾಡಲು ಹಳ್ಳಿ ಹಳ್ಳಿ ಸುತ್ತುವ ಇವರಿಗೆ ಮಧ್ಯಾಹ್ನ ಕಳೆದ್ರೂ, ಒಂದು ಕಂಬಳಿ ಮಾರಾಟವಾಗದೇ ಜನ ಬರೋದು ಬೆಲೆ ಕೆಳೋದು ಕೈ ಬಿಟ್ಟು ಹೋಗುವ ಪ್ರಸಂಗ ಸಹಜವಾಗಿದೆ.

ಇನ್ನೂ ಅಪ್ಪಟ್ಟ ಕುರಿ ನೂಲಿನಿಂದ ಮಾಡಿದ 600 ರಿಂದ 1500 ರೂಪಾಯಿ ಕಂಬಳಿ ಚಳಿಗಾಲದ ಬೆಚ್ಚನೆ 120 ರೂಪಾಯಿ ಟೋಪಿ ಸಹ ಮಾರಾಟ ಕಂಡಿಲ್ಲ, ಆಧುನಿಕತೆಯಲ್ಲಿ ರಗ್ಗು, ಚಾದರ್, ಬೆಡಶೀಟ್ ಮೋರೆ ಹೋಗುವ ಜನರಲ್ಲಿ ಕಂಬಳಿ ಬಳಸುವವರ ಸಂಖ್ಯೆ ಬಹು ವಿರಳವಾಗಿದೆ.

ಒಟ್ಟಾರೆ ನೂಲುವವರ ಬದುಕನ್ನು ಹಸನು ಮಾಡಬೇಕಿದ್ದ ಕಂಬಳಿ ಇದೀಗ ಕೇವಲ ಶುಭ ಕಾರ್ಯಕ್ಕೆ ಸಿಮೀತವಾಗಿ ನಷ್ಟದ ಬದುಕಲ್ಲಿ ಕಂಟುತ್ತ ಸಾಗುತ್ತಿದೆ.

Edited By : Shivu K
Kshetra Samachara

Kshetra Samachara

06/02/2022 02:52 pm

Cinque Terre

62.32 K

Cinque Terre

3

ಸಂಬಂಧಿತ ಸುದ್ದಿ