ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಳಿವಿನಂಚಿನಲ್ಲಿರುವ ಉಡ ರಕ್ಷಣೆ ಮಾಡಿದ ಯುವಕರು

ಕುಂದಗೋಳ : ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳಲ್ಲಿ ಒಂದಾದ ಉಡವನ್ನು ರಕ್ಷಿಸಿ ಯುವಕರು ಮರಳಿ ಜಮೀನಿಗೆ ಬಿಟ್ಟು ಪ್ರಾಣಿ ಪ್ರೇಮವನ್ನು ಮೆರೆದಿದ್ದಾರೆ.

ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಹೊಲದ ಪಕ್ಕದ ರಸ್ತೆ ಬದಿಯಲ್ಲಿ ಅಸ್ವಸ್ಥಗೊಂಡು ಮಲಗಿದ್ದ ಉಡವನ್ನು ಯುವಕರು ಹಗ್ಗಕ್ಕೆ ಕಟ್ಟಿಕೊಂಡು, ಗ್ರಾಮಕ್ಕೆ ತಂದು ನೀರು ಕುಡಿಸಿ ಕೆಲಹೊತ್ತು ನೆರಳಿನ ವಾತಾವರಣದಲ್ಲಿ ಕಟ್ಟಿ ಹಾಕಿ ಉಡ ವಿಶ್ರಾಂತಿ ತೆಗೆದುಕೊಂಡ ಬಳಿಕ ಮರಳಿ ಹೊಲಕ್ಕೆ ತೆಗೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ.

ಪ್ರದೀಪ್ ಡೊಳ್ಳಿನ ಸಂಗಮೇಶ್ ಹಡಪದ ಎಂಬ ಯುವಕರೇ ಉಡವನ್ನು ರಕ್ಷಣೆ ಮಾಡಿ ಹೊಲಕ್ಕೆ ಬಿಟ್ಟು ಬಂದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Edited By : Shivu K
Kshetra Samachara

Kshetra Samachara

09/01/2022 05:25 pm

Cinque Terre

28.19 K

Cinque Terre

1

ಸಂಬಂಧಿತ ಸುದ್ದಿ