ಕುಂದಗೋಳ : ಅಬ್ಬಾ ! ಹೊಸ ವರ್ಷ ಬಂತೆಂದು ಗುಂಡು ತುಂಡು ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸುವವರ ಮಧ್ಯೆ ಇಲ್ಲೊಂದು ಊರಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ತಾಯಿಂದಿರ ಪಾದಪೂಜೆ ಮಾಡಿದ್ದಾರೆ.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಮಕ್ಕಳೇ ಇಂತಹದೊಂದು ಶ್ರದ್ಧಾ, ಭಕ್ತಿ, ಸಾರ್ಥಕತೆಯ ಸೇವೆ ಮಾಡಿ ಹಡೆದವ್ವನ ಪಾದ ಪೂಜೆ ಮಾಡಿ ಅವಳ ಕಣ್ಣಲ್ಲಿ ಆನಂದ ಭಾಷ್ಪ ಹರಸಿದವರು.
ನೂತನ ವರ್ಷದ ಸಂಭ್ರಮವನ್ನು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಅಮ್ಮಾ ನಮನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿ ಯರೇಬೂದಿಹಾಳದ ಅಂಗನವಾಡಿ ಕಟ್ಟಡದಲ್ಲಿ ಬರೋಬ್ಬರಿ 25 ಕ್ಕೂ ಹೆಚ್ಚು ಮಕ್ಕಳು ತಮ್ಮ ತಮ್ಮ ತಾಯಿಂದರ ಪಾದಪೂಜೆ ಮಾಡಿದ್ದಾರೆ.
ಇನ್ನೂ ಸೋದರಿ ನಿವೇದಿತಾ ಪ್ರತಿಷ್ಠಾನದ ಆಧುನಿಕತೆಯಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರುವ ಸಂಬಂಧಗಳ ಏಳ್ಗೆಯಾಗಿ ಇಂತಹದ್ದೊಂದು ಕಾರ್ಯಕ್ರಮ ಏರ್ಪಡಿಸಿ ತಾಯಿ ಎಂಬ ಪದಕ್ಕೆ ಗೌರವ ಒದಗಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/01/2022 04:14 pm