ಕುಂದಗೋಳ : ಒಂದು ಕೈ ಯಿಂದ ಮಾಡಿದ ಸಹಾಯ ಮತ್ತೊಂದು ಕೈಗೆ ಗೊತ್ತಾಗಬಾರದು ಎಂಬ ಮಾತಿದೆ, ಅದರಂತೆ ಇಲ್ಲೋಬ್ರೂ ಅರ್ಹ ಕಡು ಬಡವರಿಗೆ, ನೊಂದವರಿಗೆ, ಸೂರಿಲ್ಲದವರಿಗೆ ತಮ್ಮ ಹೆಸರನ್ನು ಹೇಳದೆ ದಿನಸಿ ಕಿಟ್ ನೀಡುತ್ತಿದ್ದಾರೆ.
ಇಂತಹದ್ದೊಂದು ಕೆಲಸ ಸದ್ದಿಲ್ಲದೆ ನಡೆದು ಕುಂದಗೋಳ ತಾಲೂಕಿನ ಹಳ್ಳಿ ಹಳ್ಳಿಯ ಅತಿ ಕಡು ಬಡವರನ್ನು ಕಷ್ಟದಲ್ಲಿರುವವರನ್ನು ಗುರುತಿಸಿ ಅವರ ಮನೆಗೆ 1500 ರೂಪಾಯಿ ವೆಚ್ಚದ ಅಗತ್ಯ ದಿನಸಿ ಸಾಮಗ್ರಿ ನೀಡುತ್ತಿದ್ದು, ಇದರಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಸಹ ಸೇರಿವೆ.
ಕುಂದಗೋಳ ತಾಲೂಕಿನ ಸಮಾನ ಮನಸ್ಕ ಯುವಕರ ಹಾಗೂ ಆಯಾ ಗ್ರಾಮದ ಮುಖಂಡರ ಮೂಲಕ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೋ, ಸಂಸ್ಥೆಯೋ ಗೊತ್ತಿಲ್ಲಾ, ಬಡವರಿಗೆ ಆಹಾರ ಸಾಮಗ್ರಿ ಕಿಟ್ ತಲುಪಿಸುವ ನಿಸ್ವಾರ್ಥ ಸೇವೆಯ ಕಾರ್ಯ ಕೈಗೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಒಟ್ಟಾರೆ ಸೇವೆ ಮಾಡಿ ಹೆಸರು ಪಡೆದುಕೊಳ್ಳುವವರ ನಡುವೆ, ಸೇವೆ ಸಲ್ಲಿಸುವವರು ಯಾರೆಂಬದೇ ಗೊತ್ತಾಗದಂತೆ ಸಹಾಯ ಮಾಡುತ್ತಿರುವ ಇವರಿಗೊಂದು ಸಲಾಂ.
Kshetra Samachara
26/12/2021 02:21 pm