ಹುಬ್ಬಳ್ಳಿ: ಅಟಲ್ ಬಿಹಾರಿ ವಾಜಪೇ ಅವರ ಸ್ಮರಣಾರ್ಥವಾಗಿ ಹುಬ್ಳಳ್ಳಿಯ 65 ವರ್ಷದ ವೃದ್ಧರೊಬ್ಬರು, ವಾಜಪೇಯಿ
ನಿರ್ಮಿಸಿದ ಸುರ್ವಣ ಚತುಷ್ಟದ ರಸ್ತೆ ದೇಶಕ್ಕೆ ಎಷ್ಟು ಅನುಕೂಲವಾಗಿದೆ ಎಂಬುದನ್ನ ತಿಳಿಸಲು ಹಾಗೂ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲು ಸುಮಾರು 6000 ಕಿ.ಮಿ ಬೈಕ್ ರೈಡ್ ಮಾಡಲು ಮುಂದಾಗಿದ್ದಾರೆ.
ಶಂಕರ ದೊಡ್ಡಮನಿ ಎಂಬುವವರು, ಹುಬ್ಬಳ್ಳಿಯಿಂದ ಮುಂಬೈ, ದಿಲ್ಲಿ, ಕೊಲ್ಕತಾ, ಮದ್ರಾಸ್, ಬೆಳಗಾವಿ ಮತ್ತೆ ಹುಬ್ಬಳ್ಳಿ ಬರುವಂತಹ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಈ ಒಂದು ಪ್ರಯಾಣಕ್ಕೆ ಎಸಿಪಿ ವಿನೋದ ಮುಕ್ತೆದಾರ, ಪೂರ್ವ ಸಂಚಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್. ಕಾಡದೇವರಮಠ ಅವರು ನಗರದ ಚನ್ನಮ್ಮ ಸರ್ಕಲ್ ಬಳಿ ಚಾಲನೆ ನೀಡಿದರು.
Kshetra Samachara
20/12/2021 02:13 pm