ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಮಾನ ಮನಸ್ಕರರ ಸಾಮಾಜಿಕ ಕಾರ್ಯ ಸೂರಿಲ್ಲದವರಿಗೆ ಸೂರು

ಕುಂದಗೋಳ : ಬಡವರಿಗೆ ಆಶ್ರಯವಾಗಬೇಕು, ನಮ್ಮ ಕೈಲಾದ ಸೇವೆ ಅವರಿಗೆ ತಲುಪಬೇಕು ಅದೆಷ್ಟೋ ನಿರಾಶ್ರಿತರ ಪೈಕಿ ಕನಿಷ್ಟ ಐದು ಮನೆಗಳಿಗೆ ಆದ್ರೂ ನಾವು ಸೂರು ಭಾಗ್ಯ ಕಲ್ಪಿಸಬೇಕು ಭಗವಂತನ ಕೃಪೆ ಇದ್ರೇ ಎಲ್ಲರಿಗೂ ಸೂರು ಒದಗಿಸೋಣ ಎಂದು ಇಲ್ಲೋಂದು ಯುವಕರು ತಂಡ ಹಳ್ಳಿ ಹಳ್ಳಿಗೆ ಭೇಟಿ ಕೊಡುತ್ತಿದೆ.

ಹೌದು ! ಕುಂದಗೋಳ ತಾಲೂಕಿನ ಸಮಾನ ಮನಸ್ಕರರ ಗುಂಪೊಂದು ಇಂತಹ ಪರೋಪಕಾರದ ಕೆಲಸಕ್ಕೆ ಕೈ ಹಾಕಿದ್ದು, ಮಳೆ ಅತಿವೃಷ್ಟಿ ಸೇರಿದಂತೆ ಇತರೆ ಕಾರಣಗಳ ಪರಿಣಾಮ ಮನೆ ಕಳೆದುಕೊಂಡ ಅತಿ ಕಡು ಬಡತನದ ಕುಟುಂಬಗಳಿಗೆ ಸೂರು ಅಂದ್ರೇ ವಾಸಕ್ಕೆ ಎಷ್ಟು ಬೇಕೋ ಅಷ್ಟು ಶುದ್ಧವಾದ ಕನಿಷ್ಠ ಒಂದು ಲಕ್ಷ ವೆಚ್ಚದ ಆಶ್ರಯ ಕಲ್ಪಿಸಲು ಮುಂದಾಗಿದೆ.

ಈಗಾಗಲೇ ಕುಂದಗೋಳ ತಾಲೂಕಿನ ರಾಮನಕೊಪ್ಪ, ಹೊಸಕಟ್ಟಿ, ಯಲಿವಾಳ, ನೆಲಗುಡ್ಡ, ಹರ್ಲಾಪೂರ, ಇಂಗಳಗಿ ಗ್ರಾಮಗಳಿಗೆ ಭೇಟಿ ನೀಡಿದ ಸಮಾನ ಮನಸ್ಕರರು ಮುಂಬುರುವ ದಿನಗಳಲ್ಲಿ ಇಡೀ ಕುಂದಗೋಳ ತಾಲೂಕಿನ್ನು ಸುತ್ತಿ ಸೂರು ನಿರ್ಮಿಸಿಕೊಡುವ ಆಲೋಚನೆ ಹಾಕಿದ್ದು ಪ್ರಥಮವಾಗಿ ನೆಲಗುಡ್ಡ ಗ್ರಾಮದಲ್ಲಿ ಮೊದಲ ಸೂರು ನಿರ್ಮಾಣವಾಗಲಿದೆ.

ಈ ರೀತಿ ಸೂರು ಕಲ್ಪಿಸಲು ಮುಂದಾದ ಸಮಾನ ಮನಸ್ಕರರ ಚಿಂತನೆ ಕಾರ್ಯಕ್ಕೆ ನೀವೂ ಸಹಾಯ ಮಾಡುವುದಾದರೇ 8722420587 ಅಥವಾ 7996446710 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೇರ ಫಲಾನುಭವಿಗಳಿಗೆ ನಿಮ್ಮ ಸಹಾಯ ತಲುಪಿಸಿ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
Kshetra Samachara

Kshetra Samachara

10/12/2021 05:32 pm

Cinque Terre

22.73 K

Cinque Terre

6

ಸಂಬಂಧಿತ ಸುದ್ದಿ