ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಭಾರತಾಂಬೆಯ ಸೇವೆಗೈದು ಮರಳಿ ಸ್ವಗ್ರಾಮಕ್ಕೆ ಬಂದ ಯೋಧರಿಗೆ ಅದ್ಧೂರಿ ಸ್ವಾಗತ

ಅಣ್ಣಿಗೇರಿ : ನಿರಂತರವಾಗಿ 20 ವರ್ಷಗಳ ಕಾಲ ಭಾರತ ಮಾತೆಯ ಸೇವೆಗೈದು ಮರಳಿ ಸ್ವಗ್ರಾಮಕ್ಕೆ ಬಂದ ಯೋಧರನ್ನು ಫಲಪುಷ್ಪ ನೀಡುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ನಿವೃತ್ತ ಯೋಧರಾದ ಬಸವರಾಜ ಚನ್ನಪ್ಪ ಕಪ್ಪತ್ತನವರ ಹಾಗೂ ಬಸವರಾಜ ಪಲ್ಲೇದ ಅವರನ್ನು ಸ್ಥಳೀಯರು ಪಟ್ಟಣದ ತುಂಬೆಲ್ಲ ಮೆರವಣಿಗೆ ಮಾಡುವ ಮೂಲಕ ಮನೆಗೆ ಸ್ವಾಗತಿಸಿಕೊಂಡಿರುವದು ಎಲ್ಲರ ಗಮನ ಸೆಳೆದಿತ್ತು. ನಿವೃತ್ತ ಯೋಧರು 7 ರಾಜ್ಯಗಳಲ್ಲಿ ತಮ್ಮ ಸೇವೆ ಗೈದಿರುವದು ತುಂಬಾ ಸಂತೋಷವನ್ನುಂಟು ಮಾಡಿರುವುದು ಗ್ರಾಮಸ್ಥರ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಯುವಕರ ದಂಡು ಡಿಜೆ ಕುಣಿತಕ್ಕೆ ಮೊರೆ ಹೊಗಿರುವುದು ಕೂಡಾ ಎಲ್ಲರ ಮನಸೆಳೆದಿತ್ತು. ತೆರೆದ ವಾಹನದಲ್ಲಿ ಮೆರವಣಿಗೆ ಮಾಡುತ್ತಿರುವಾಗ ಭಾರತ ಮಾತಾ ಕಿ ಜೈ ಎಂಬ ಘೋಷಣೆ ಗಳು ಗ್ರಾಮಸ್ಥರಲ್ಲಿ ಕಂಡು ಬಂದವು.

Edited By : Nagesh Gaonkar
Kshetra Samachara

Kshetra Samachara

06/11/2021 10:12 pm

Cinque Terre

72.21 K

Cinque Terre

2

ಸಂಬಂಧಿತ ಸುದ್ದಿ