ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಮಣ್ಣನ್ನೇ ನಂಬಿದವರ ಬದುಕು ಮಣ್ಣಾಗುವ ಮೊದಲೇ ಹಣತೆ ಹಚ್ಚೋಣ

ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

ಹುಬ್ಬಳ್ಳಿ : ಬೆಳೆಕಿನ ಹಬ್ಬಾ ದೀಪಾವಳಿ ಇನ್ನೇನು ವಾರವಷ್ಟೇ ಬಾಕಿ ಇದೆ, ಆ ದೀಪದ ಸಂಭ್ರಮವನ್ನು ಬರಮಾಡಿಕೊಳ್ಳಲು ನಾವು ನೀವೂ ತುದಿಗಾಲಲ್ಲಿ ನಿಂತಿದ್ದೇವೆ, ಆದ್ರೇ ಅದೇ ದೀಪವನ್ನು ತಯಾರಿಸುವ ಮತ್ತು ಮಾರಾಟ ಮಾಡುವವರ ಬದುಕು ಹೀಗೆ ಹಗಲಲ್ಲೇ ಗ್ರಾಹಕರಿಲ್ಲದೇ ಕತ್ತಲಾಗಿದೆ.

ಹೌದು ! ಮಣ್ಣನ್ನೇ ನಂಬಿ ಆ ಮಣ್ಣಿನಿಂದ ಹೀಗೆ ವಿಧ ವಿಧದ ಹಣತೆ, ಮಡಕೆ, ನೀರಿನ ಬಾಣಿ ಸೇರಿದಂತೆ ಇತರೆ ಪರಿಕರಗಳನ್ನು ತಯಾರಿಸಿ ಮಾರುವವರ ಬದುಕಿಗೆ ಆಧುನಿಕತೆಯ ಕಾರಣ ಗ್ರಾಹಕರ ಬರ ಎದರಾಗಿ ನಿತ್ಯ ಪುಡಿಗಾಸು ಎಣಿಸಿ ಮರಳಿ ಮನೆ ತಲುಪುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ವರ್ಷ ಇದೇ ದೀಪಾವಳಿ ಹಬ್ಬದಂದು ಕೊರೊನಾ ಹಾವಳಿಗೆ ಕಮರಿದ ಕುಂಬಾರರ ಬದುಕು. ಈ ಬಾರಿ ಗ್ರಾಹಕರ ಕೊರತೆಯಿಂದ ಬಳಲುತ್ತಿದೆ. ಹುಬ್ಬಳ್ಳಿ ಹೃದಯಭಾಗ ಸಂಗೋಳ್ಳಿ ರಾಯಣ್ಣನ ವೃತ್ತದ ಬಳಿ ಹೀಗೆ ಬಿಸಿಲ ಹೊದಿಕೆ ಹೊತ್ತು ಕೂತ ಈ ಹಿರಿಜೀವಗಳು ಬೆರಳಿಣಿಯಷ್ಟೇ ಗ್ರಾಹಕರಿಗೆ ತೃಪ್ತಿ ಪಡುತ್ತಿವೆ.

ಅದರಲ್ಲೂ ಕುಂಬಾರರು ಮಾಡಿದ ಹಣತೆಗಳಿಗೆ, ಈ ಚಿತ್ತಾರದ ಚೀನಾ ದೀಪಗಳು ಸ್ಪರ್ಧೆ ಒಡ್ಡಿದ್ದು, ಗ್ರಾಹಕರು ಆಕರ್ಷಣೆ ನೋಡಿ ಈ ಹಣತೆಯನ್ನೇ ಖರೀದಿ ಮನಸ್ಸು ಮಾಡುತ್ತಿದ್ದು ಅದು ಕೇವಲ ಒಂದೋ ಎರೆಡೋ ದೀಪ ಮಾತ್ರ ಮಾರಾಟವಾಗುತ್ತಿವೆ. ಇನ್ನೂ ಕೈಯಿಂದ ಮಾಡಿದ ಇತರೆ ಪರಿಕರಗಳ ಖರೀದಿಗೆ ಜನ ಬಾರದ ಹಿನ್ನೆಲೆಯಲ್ಲಿ ಮುಂದೊಂದು ದಿನ ಕುಂಬಾರಿಕೆ , ಮಣ್ಣಿನ ಪರಿಕರಗಳು ಇತಿಹಾಸದ ವಸ್ತು, ಪಾಠವಾದ್ರೂ ಅಚ್ಚರಿ ಪಡಬೇಕಿಲ್ಲ.

ಹೀಗೆ ಪ್ರಾಚೀನ ಕಾಲದ ಕಲೆಯಾದ ಕುಂಬಾರಿಕೆ ಉಳಿಸಲು ಈ ದೀಪಾವಳಿಗೆ ಮಣ್ಣಿನ ಹಣತೆ ಹಚ್ಚೋಣ.

Edited By : Nagesh Gaonkar
Kshetra Samachara

Kshetra Samachara

27/10/2021 04:59 pm

Cinque Terre

78.45 K

Cinque Terre

2

ಸಂಬಂಧಿತ ಸುದ್ದಿ