ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಧಿಕಾರಿಗಳಿಗೆ ಮಾನವೀಯತೆ ಪ್ರಶ್ನೆ ? ವೃದ್ಧನ ಈ ನರಳಾಟಕ್ಕೆ ಹೊಣೆ ಯಾರು ?

ಕುಂದಗೋಳ : ಸರ್ಕಾರಿ ಆಸ್ಪತ್ರೆಯ ಮಾನ್ಯ ಆರೋಗ್ಯ ಶಿಕ್ಷಣಾಧಿಕಾರಿಗಳೇ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕರೇ, ಹಾಗೂ ತಾಲೂಕು ಕಚೇರಿ ಆರೋಗ್ಯಾಧಿಕಾರಿಗಳೇ ಈ ಕುಂದಗೋಳ ಪಟ್ಟಣದಲ್ಲಿ ನಿವೇಲ್ಲಾ ಇದ್ದರೂ ಇಲ್ಲೋಬ್ಬ ವೃದ್ಧನ ನರಟಾಳಕ್ಕೆ ಅಂತ್ಯ ಸಿಗುತ್ತಿಲ್ಲ ಎಂದ್ರೇ ನಿಮ್ಮ ಮಾನವೀಯತೆ ಎಲ್ಲಿ ಹೋಯ್ತು ಎಂದು ಜನ ಪ್ರಶ್ನೆ ಮಾಡ್ತಾ ಇದ್ದಾರೆ.

ಕುಂದಗೋಳ ಪಟ್ಟಣದ ರಾಜ್ಯ ಹೆದ್ದಾರಿಯ ಪಕ್ಕದ ಬಸ್ ನಿಲ್ದಾಣದಲ್ಲಿ ಬಿದ್ದು ಒದ್ದಾಡುತ್ತಿರುವ ಈ ವೃದ್ಧನ ಪರಿಸ್ಥಿತಿ ಗಮನಿಸಿ, ಮೊನ್ನೆ ತಾನೇ ಮಾನವೀಯತೆ ದೃಷ್ಟಿಯಿಂದ ಯುವಕರು ಆತನಿಗೆ ಕಟಿಂಗ್ ಸೇವ್ ಮಾಡಿಸಿ ಹೊಸ ಬಟ್ಟೆ ತೊಡಿಸಿ ಒಂದು ರೂಪ ಕೊಟ್ಟು ಶಾಶ್ವತ ಸೂರು ಕಲ್ಪಿಸಲು ನಿರ್ಗತಿಕ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.

ಆದ್ರೇ, ಸ್ಥಳೀಯ ಅಧಿಕಾರಿಗಳು ಆ ವೃದ್ಧನ ಆರೊಗ್ಯದ ಸಂಬಂಧಿಸಿದಂತೆ ಪ್ರಮಾಣ ಪತ್ರ ನೀಡದೆ ಅದು ಅಸಾಧ್ಯದ ಮಾತಾಗಿದೆ ವೃದ್ಧನಿಗೆ ವಾಹನ ಅಪಘಾತವಾದ ಕಾರಣ ಔಷಧೋಪಚಾರ ಅಗತ್ಯ ವಿದ್ದು ನಿರ್ಗತಿಕರ ಕೇಂದ್ರದ ನಿರ್ಧಾರ ನಿಮ್ಮ ಸಹಕಾರ ಕೇಳುತ್ತಲಿದೆ.

ಈಗಲೂ ಸಹ ನಿರ್ಗತಿಕರ ಕೇಂದ್ರದವರು ಈ ವೃದ್ಧನಿಗೆ ಸೂರು ಕೊಡಲು ಸಿದ್ಧರಾಗಿದ್ದಾರೆ, ಆದರೆ ಈ ಗಾಯಗೊಂಡ ವೃದ್ಧನನ್ನು ಈ ಅನೈರ್ಮಲ್ಯದ ಸಿಲುಕಿರುವ ಆತನ ಆರೋಗ್ಯವನ್ನು ಸ್ಥಳೀಯ ವ್ಯವಸ್ಥೆ ಸುಧಾರಿಸಿ ನಿರ್ಗತಿಕ ಕೇಂದ್ರಕ್ಕೆ ಆತನನ್ನು ಹಸ್ತಾಂತರಿಸುವ ಕರ್ತವ್ಯ ನಿಮ್ಮಿಂದ ಆಗಬೇಕಿದೆ. ಮಾನ್ಯ ಪೊಲೀಸ್ ಅಧಿಕಾರಿಗಳೇ ದೇಹಕ್ಕೆ ಗಾಯವಾಗಿರುವ ಈ ವೃದ್ಧನ ಜೀವಕ್ಕೆ ತೊಂದರೆ ಆಗುವ ಮುನ್ನ ಗಮನಿಸಿರಿ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

16/10/2021 05:09 pm

Cinque Terre

25.99 K

Cinque Terre

0

ಸಂಬಂಧಿತ ಸುದ್ದಿ